ನ್ಯಾಮತಿ ಃ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವನ್ನು ರಾಷ್ಟ್ರದಾದ್ಯಂತ ಆಚರಿಸಲು ರಾಜ್ಯವ್ಯಾಪ್ತಿ ವೀರಶೈವ ಸಂಘಟನೆಗಳು ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣ ಹಾಗೂ ತಾಲೂಕಿನಾದಂತ್ಯ ಮಂಗಳವಾರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವವನ್ನು ಅಚರಿಸಲಾಯಿತು.

ವೀರಶೈವ ಲಿಂಗಾಯತ ಧರ್ಮ ಪರಂಪರೆಯಲ್ಲಿ ವೀರ , ನಂದಿ ,ಭೃಂಗಿ , ವೃಷಭ, ಸ್ಕಂದ ಎಂಬ ಗೋತ್ರ ಪುರುಷರಲ್ಲಿ ಪ್ರಥಮ ಪುರುಷನಾಗಿದ್ದು , ಪ್ರಜಾಪತಿ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿಂದ ಅವತರಿಸಿದ ಶ್ರೀ ವೀರಭದ್ರ ಸ್ವಾಮಿಯು ಶಿವಭಕ್ತರನ್ನು ಸಂರಕ್ಷಿಸುವ ಮತ್ತು ಅಧರ್ಮ ಮಾರ್ಗದಲ್ಲಿ ನಡೆಯುವರಿಗೆ ಧರ್ಮ ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾನೆ ಅಖಿಲ ಭಾರತ ಮಟ್ಟದಲ್ಲಿ ವೀರಭದ್ರ ಪರಂಪರೆ ಮತ್ತು ಸಂಸ್ಕøತಿಯನ್ನು ಅರಿತುಕೊಳ್ಳುವ ಬಗ್ಗೆ ಪ್ರತಿ ವರ್ಷ ಭಾದ್ರಪದ ಮಾಸದ ಮಾದಲನೇ ಮಂಗಳವಾರ ದೇಗುಲ , ಮಠ ಮಾನ್ಯಗಳಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವನ್ನು ಸಾರ್ವತ್ರಿಕವಾಗಿ ಕಳೆದ ಎರಡು ವರ್ಷಗಳಿಂದ ಕೊರೋಣ ನಿಮಿತ್ತ ಸರಳವಾಗಿ ಆಚರಣೆಯನ್ನು ನಡೆಸುತ್ತ ಬಂದಿದೆ.

ವೀರಭದ್ರೇಶ್ವರನನ್ನು ಮನೆದೇವರು ವೀರಶೈವ ಲಿಂಗಾಯತ ಬಾಂಧವರು, ಪಟ್ಟಣದ ಕಲ್ಮಠದ ಶ್ರೀ ವೀರಭದ್ರೇಶ್ವರ ಸ್ವಾಮಿ , ಚೀಲೂರು ರಸ್ತೆಯ ಶ್ರೀ ವೀರಭದ್ರೇಶ್ವರ ದೇಗುಲದ ಶ್ರೀ ವೀರಭದ್ರೇಶ್ವರಸ್ವಾಮಿ , ಚೀಲೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದ ಶ್ರೀ ವೀರಭದ್ರೇಶ್ವರಸ್ವಾಮಿ , ಕುಂಕುವ ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದ ಶ್ರೀ ವೀರಭದ್ರೇಶ್ವರಸ್ವಾಮಿ , ದೊಡ್ಡೇತ್ತೀನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದ ಜೋಡಿ ಶ್ರೀ ವೀರಭದ್ರೇಶ್ವರಸ್ವಾಮಿ ಮೂರ್ತಿ , ಯರಗನಾಳು ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದ ಜೋಡಿ ಶ್ರೀ ವೀರಭದ್ರೇಶ್ವರಸ್ವಾಮಿ ಮೂರ್ತಿ , ಕಣಿವೆ ವೀರಣ್ಣ ದೇಗುಲದ ಶ್ರೀ ವೀರಭದ್ರೇಶ್ವರಸ್ವಾಮಿ ಹಾಗೂ ಸಮೀಪದ ಅಲದಹಳ್ಳಿ ಗ್ರಾಮದ ಬೆಟ್ಟದ ಮೇಲೆರುವ ಶ್ರೀ ವೀರಭದ್ರೇಶ್ವರ ದೇಗುಲದ ಜೋಡಿ ಶ್ರೀ ವೀರಭದ್ರೇಶ್ವರಸ್ವಾಮಿ ಶಿಲಾಮೂರ್ತಿಗಳಿಗೆ ವಿಶೇಷ ಪೂಜಾ ಹಣ್ಣು ಕಾಯಿ ಅರ್ಪಿಸಿ ದರ್ಶನ ಪಡೆದರು.

ಭಾದ್ರಪದ ಮಾಸದ ಮೊದಲನೇ ಮಂಗಳವಾರದಂದು ಪ್ರತಿವರ್ಷ ವೀರಭದ್ರೇಶ್ವರ ದೇಗುಲಗಳಲ್ಲಿ ಜಯಂತಿ ಆಚಾರಿಸುತ್ತಿದ್ದರು, ಅದನ್ನು ಕಳೆದ ಎರಡು ಮೂರು ವರ್ಷಗಳಿಂದ ಸಾರ್ವತ್ರಿಕವಾಗಿ ಆಚಾರಣೆ ಮಾಡುವಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತರ ಮಹಾಸಭಾ , ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ವೀರಭದ್ರೇಶ್ವರ ಭಕ್ತವೃಂದ ಶ್ರಮಿಸಿದ ಪರಿಣಾಮ ಸ್ವಲ್ಪ ಜಾಗ್ರತೆ ಮತ್ತು ಸಂಚಲನ ದೇಶದಾದ್ಯಂತ ಮೂಡಿಸುವ ಕೆಲಸ ಮಾಡುತ್ತದೆ.ಎಂ.ಎಸ್.ಶಾಸ್ತ್ರೀಹೊಳೆಮಠ್. ಪುರೋಹಿತರು , ಜ್ಯೋತಿಷಿಗಳು.

Leave a Reply

Your email address will not be published. Required fields are marked *

You missed