ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಗಳೂರು
ತಾಲ್ಲೂಕು ತನಿಖಾ ತಂಡದೊಂದಿಗೆ ಬಿಳಿಚೋಡು ಪೆÇಲೀಸ್ ಠಾಣಾ
ವ್ಯಾಪ್ತಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ
ರಚಿಸಿಕೊಂಡು ತಂಬಾಕು ದಾಳಿ ಕೈಗೊಳ್ಳಲಾಯಿತು.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ
ಅಧಿನಿಯಮ-2003 ರ ಅಡಿಯಲ್ಲಿ ಒಟ್ಟು 24 ಪ್ರಕರಣ ದಾಖಲಿಸಿ
ರೂ.2100 ದಂಡ ವಿಧಿಸಲಾಗಿದೆ. ದಾಳಿಯ ವೇಳೆ ತಂಡವು
ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 293 ಮಕ್ಕಳು ತಂಬಾಕು
ಸೇವನೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ 18 ವರ್ಷದೊಳಗಿನ
ಯುವಕ-ಯುವತಿಯರಿಗೆ ತಂಬಾಕು ಉತ್ಪನ್ನಗಳು
ಮಾರಾಟ ಮಾಡಬಾರದು ಹಾಗೂ ಶೈಕ್ಷಣಿಕ ಸಂಸ್ಥೆಯ 100
ಗಜದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ
ಅಂಗಡಿ ಮಾಲಿಕರಿಗೆ ಸೂಚಿಸಲಾಯಿತು.
ದಾಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಮೇಲ್ವಿಚಾರಣ ಅಧಿಕಾರಿ
ಎಂ.ವಿ ಹೊರಕೇರಿ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ
ಕಾರ್ಯಕರ್ತ ದೇವರಾಜ್ ಕೆ.ಪಿ, ಹಿರಿಯ ಆರೋಗ್ಯ
ನಿರೀಕ್ಷಣಾಧಿಕಾರಿ ಪರುಶುರಾಮ್, ಸಮೂದಾಯ ಆರೋಗ್ಯ
ಅಧಿಕಾರಿ ಅಶ್ವಿನಿ.ಸಿ ಮತ್ತು ರವಿ, ಬಿಳಿಚೋಡು ಪೋಲೀಸ್ ಠಾಣೆಯ
ಸಿಬ್ಬಂದಿ ಉಮಾಶಂಕರ್ ಭಾಗವಹಿಸಿದ್ದರು.