ನ್ಯಾಮತಿ ಃ ಹಿಂದುಗಳ ಪವಿತ್ರಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯನ್ನು ನ್ಯಾಮತಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಬುಧವಾರ ಆಚರಣೆ ಮಾಡಲಾಯಿತು.
ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಚೌತಿಯಂದು ಗಣೇಶ ಚತುರ್ಥಿ ಬರುತ್ತದೆ. ಅಂದಿನ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಬ್ಬದ ಆಚರಣೆಗೆ ಸಕಲ ರೀತಿಯ ತಯಾರಿ ನಡೆದಿದೆ. ಶುಕ್ರವಾರ ಪಟ್ಟಣ ಹಾಗೂ ತಾಲೂಕಿನಾದ್ಯಂತ ಗೌರಿ -, ಗಣೇಶ ಹಬ್ಬವನ್ನು ಸರಳ ಹಾಗೂ ಸುಂದರವಾಗಿ ಆಚರಿಸಲಾಯಿತು.
ಪಟ್ಟಣದಲ್ಲಿರುವ ಕೋಡಿಕೋಪ ರಸ್ತೆಯ ಕಲ್ಮಠದಲ್ಲಿರು ಸರ್ವ ಸಿದ್ದಿ ವಿನಾಯಕ ಶಿಲಾಮೂರ್ತಿಗೆ ವಿಶೇಷ ಪೂಜಾ , ಗಣೇಶ ಚತುರ್ಥಿಯ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ತಳಿರು ತೋರಣ ಮತ್ತು ದೀಪಾಲಂಕಾರದೊಂದಿಗೆ ಅಲಂಕಾರಿಕ ಪುಷ್ಪಗಳಿಂದ ಸಿಂಗರಿಸಲಾಗಿತ್ತು.
ಬೆಳಗ್ಗೆಯಿಂದಲೇ ಸಾರ್ವಜನಿಕರು ಕಲ್ಮಠಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬವಾದರೆ ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬ ವಿಶೇಷವಾಗಿ ಯುವಕರ ಹಬ್ಬ. ಈ ಬಹುದೊಡ್ಡ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಬುಧವಾರ ಆಚರಣೆ ಮಾಡಲಾಯಿತು.