ಹುಣಸಘಟ್ಟ: ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಗೆ ಬೆಲೆ ಕಟ್ಟಲಾಗದು. ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಇದನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ತಾಲೂಕ ಸಮನ್ವಯಾಧಿಕಾರಿ ತಿಪ್ಪೇಶಪ್ಪ ಕರೆ ನೀಡಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹನಗವಾಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಲಿಂಗಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಪಠ್ಯದ ಜೊತೆಗೆ ಸೃಜನಾತ್ಮಕತೆ ಕ್ರಿಯಾಶೀಲತೆ ಬೆಳೆಸುವುದು ಶಿಕ್ಷಕರ ಮತ್ತು ಪಾಲಕರ ಕರ್ತವ್ಯ. ವಿದ್ಯಾರ್ಥಿಗಳು ಚಟುವಟಿಕೆಯಿಂದ ಕೂಡಿದರೆ ಮೆದುಳು ಚುರುಕಾಗಿ ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತಾರೆ ಎಂದರು.
ಇ ಸಿ ಓ ಕೆ ಕೆಎಂ ರಾಜಶೇಖರಯ್ಯ ಮಾತನಾಡಿ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ಪ್ರತಿಭಾಕಾರಂಜಿ ಸ್ಥಗಿತಗೊಂಡಿತ್ತು. ಗೋವಿಂದ್ ಆತಂಕ ದೂರವಾಗಿ ಶೈಕ್ಷಣಿಕ ವ್ಯವಸ್ಥೆ ಸಹಜಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಈ ವರ್ಷದಿಂದ ಪ್ರತಿಭಾಕಾರಂಜಿ ಮತ್ತೆ ಪ್ರಾರಂಭವಾಗಿದ್ದು ಶಿಕ್ಷಕರು ಮತ್ತು ಮಕ್ಕಳಲ್ಲಿ ಉತ್ಸಾಹ ಇಮ್ಮಡಿಯಾಗಿದೆ ಎಂದರು.
ಸಿ ಆರ್ ಪಿ ಕುಮಾರ್ ಆಶಯನುಡಿ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಲಸ್ಟರ್ ನ 9 ಎಚ್ ಪಿ ಎಸ್,7 ಎಲ್ ಪಿ ಎಸ್ ಶಾಲೆಗಳ ಸುಮಾರು 350 ರಿಂದ 400 ವಿದ್ಯಾರ್ಥಿಗಳು ಲಘು ಸಂಗೀತ, ಛದ್ಮವೇಷ, ಕಥೆ ಹೇಳುವುದು, ಚಿತ್ರಕಲೆ, ಅಭಿನಯ ಗೀತೆ ಕಂಠಪಾಠ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರುಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣ ಜಿ ರಾವ್ ವಯಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಬಿ ಆರ್ ಸಿ ಅರುಣ್ ಕುಮಾರ್, ಗ್ರಾ ಪಂ ಉಪಾಧ್ಯಕ್ಷ ಗೌರಮ್ಮ, ಸದಸ್ಯ ವೀರೇಶ್, ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷ ಶಿವಲಿಂಗಪ್ಪ, ರುದ್ರನಾಯ್ಕ, ಮುಖ್ಯಶಿಕ್ಷಕ ತಿಪ್ಪೇಶಪ್ಪ, ರಾಜು, ಸಿ ಆರ್ ಪಿ ಕಾಳಾಚಾರಿ, ರೇಣುಕಮ್ಮ, ಶಿಕ್ಷಕ ಸಂಘದ ಪದಾಧಿಕಾರಿಗಳು ಎಸ್ಡಿಎಂಸಿ ಸದಸ್ಯರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.