ನ್ಯಾಮತಿ ಃ ಜಗತ್ತಿನಲ್ಲಿ ಜ್ಞಾನ ಮತ್ತು ಜ್ಞಾನಿ ಪ್ರಮುಖ ಶಕ್ತಿಗಳು. ನೀರಿಗೆ ಸಂಸ್ಕಾರ ಕೊಟ್ಟರೆ ತೀರ್ಥವಾಗುತ್ತದೆ. ಅನ್ನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುತ್ತದೆ, ಸಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ. ನಿಮಗೆಲ್ಲ ಒಳ್ಳೆ ಸಂಸ್ಕಾರ ಕೊಟ್ಟರೆ ಇಡೀ ಜಗತ್‍ನ್ನೇ ಆಳುತೀರಿ ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಆನಂದ್ ತಿಳಿಸಿದರು.
ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ , ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ಘಟಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನ್ಯಾಮತಿ ಇವರ ಸಹಯೋಗದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದ ಬಗ್ಗೆ ನೀವೆಲ್ಲ ತಿಳಿಯಬೇಕು, ಇಂಥಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೇ ಶೃಂಗಾರ. ಒಳ್ಳೆ ವಿಚಾರಗಳನ್ನು ಒಳ್ಳೆ ಜನರಲ್ಲಿ ತಿಳಿಸುತ್ತಾ ಬೆರೆಯಬೇಕು. ಮಕ್ಕಳು ಇಲ್ಲದ ಶಾಲೆಗಳು ನರಕ ಇದ್ದಂತೆ ಎಂದರು.
ಖಡ್ಗಕ್ಕಿಂತ ಲೇಖನಿ ಹರಿತವಾದದು, ಪತ್ರಿಕೆಗಳು ರಾಜಕಾರಣಿಗಳ ಅಂಕು ಡೊಂಕು ತಿದ್ದುವ ಕೆಲಸ ಮಾಡುತ್ತವೆ. ಪತ್ರಿಕೆ ಸಮಾಜದ ಕನ್ನಡಿ ಇದ್ದಾಗೆ, ಪತ್ರಕರ್ತರು ಯಾರಿಗೂ ಹೆದರದೇ ತಲೆ ಬಾಗದೆ ನಿಪಕ್ಷಪಾತವಾಗಿ ವರದಿ ಮಾಡಬೇಕು. ನೀವುಗಳು ಸಹ ಪತ್ರಿಕೆಗಳನ್ನು ಕೊಂಡು ಓದಿರಿ ಬೆಳೆಸಿರಿ ಎಂದು ಆನಂದ್ ಹೇಳಿದರು.
ಉಪನ್ಯಾಸಕ ವಿಜಯಾನಂದಸ್ವಾಮಿ, ಜಿ.ನಿಜಲಿಂಗಪ್ಪ, ನವುಲೆ ಗಂಗಾಧರ್, ಹೆಚ್.ಎಂ.ಶಾಸ್ತ್ರಿ ಮಾತನಾಡಿದರು. ರಸ ಪ್ರಶ್ನೆಯಲ್ಲಿ ಪ್ರೇಮಶ್ರೀ(ಪ್ರಥಮ), ಆದಮ್(ದ್ವಿತೀಯ), ಚಂದ್ರಶೇಖರ್(ತೃತೀಯ)ವಿಜೇತರಾದರು.
ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ನವುಲೆ ಗಂಗಾಧರ್, ನಾಗರಾಜ , ಎಂ.ಎಸ್.ಶಾಸ್ತ್ರಿಹೊಳೆಮಠ್ ಮಾತನಾಡಿದರು. ಕ.ಸಾ.ಪ.ನಿರ್ದೇಶಕರಾದ ಚಂದ್ರೇಗೌಡರು, ಬಿ.ಬಸವರಾಜಪ್ಪ, ಚಂದನ್, ಜಂಗ್ಲಿ, ಪತ್ರಕರ್ತ ಎಚ್.ಎಂಸದಾಶಿವಯ್ಯ, ಮತ್ತಿತರರಿದ್ದರು.
ರಸ ಪ್ರಶ್ನೆಯಲ್ಲಿ ಪ್ರೇಮಶ್ರೀ(ಪ್ರಥಮ), ಆದಮ್(ದ್ವಿತೀಯ), ಚಂದ್ರಶೇಖರ್(ತೃತೀಯ)ವಿಜೇತರಾದರು.

Leave a Reply

Your email address will not be published. Required fields are marked *