ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ಚನ್ನದಾಸರ ಕೇರಿಯಲ್ಲಿ ಚಿನ್ನ ದಾಸ ಯುವಕ ಸಂಘದ ಸಮಿತಿಯವರು ಪ್ರತಿಷ್ಠಾಪಿಸಿದ 15 ನೇ ವರ್ಷದ ಅದ್ದೂರಿ ಗಣೇಶನ ಮೂರ್ತಿಯನ್ನು ಶುಕ್ರವಾರ ಜಾನಪದ ಕಲಾಮೇಳ ಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ಚಿನ್ನ ದಾಸ ಯುವಕ ಸಂಘವು ಮೂರುದಿನಗಳ ಕಾಲ ಅದ್ದೂರಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯವೂ ವಿಶೇಷ ಪೂಜಾ ಕೈಂಕರ್ಯಗಳು ಪಂಚ ಪಲ್ಲಾರ ಭಜನಾ ಸೇವೆ ನಡೆಯಿತು. ಮೂರನೆಯದಿನ ಕೇರಿಯ ಮುತ್ತೈದೆಯರಿಗೆ ಯುವಕ ಸಂಘದ ವತಿಯಿಂದ ಬಾಗಿನ ಹುಡಿ ಅರಿಸಿನ-ಕುಂಕುಮ ನೀಡುವ ಶಾಸ್ತ್ರವು ನಡೆಯಿತು.
ಶುಕ್ರವಾರ ಬೆಳಿಗ್ಗೆ ವಿವಿಧ ಪುಷ್ಪಗಳಿಂದ ಸಿಂಗರಿಸಿದ ಟ್ಯಾಕ್ಟರ್ ನಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಹಲಗೆ ಮೇಳ ಜಿಂಜಿ ಮೇಳ ಜಾನಪದ ಕಲಾ ಮೇಳಗಳ ಮೆರವಣಿಗೆಯು ಗ್ರಾಮದ ರಾಜಬೀದಿಗಳನ್ನು ಹೊರಟು ಕುಂಬಾರ ಬೀದಿ, ಕಲ್ಲೇಶ್ವರ ದೇವಸ್ಥಾನ ಅಗಸಿ ಬಾಗಿಲ ಮೂಲಕ ಸಾಸ್ವೆಹಳ್ಳಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಬಣ್ಣ ಎರಚಿ, ಗಣಪತಿ ಬಪ್ಪ ಮೋರಿಯಾ…… ಗಜಾನನ ಘೋಷಣೆಗಳನ್ನು ಯುವಕರು ಕೂಗುತ್ತಾ ತುಂಗಭದ್ರಾ ನದಿಯಲ್ಲಿ ಅದ್ದೂರಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ಹಾಲೇಶಪ್ಪ, ಕಾರ್ಯದರ್ಶಿಮಂಜಪ್ಪ,ಪದಾಧಿಕಾರಿಗಳಾದ ಪಕೀರಪ್ಪ ಅಣ್ಣಪ್ಪ ರವಿಕುಮಾರ್ ಶಿವು ಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.