ದಾವಣಗೆರೆ: ನವಭಾರತ ವೀಘ್ನೇಶ್ವರ ಯುವಕರ ಸಂಘ, ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘ ಹಾಗೂ ಸ್ಟೇಡಿಯಂ ಫ್ರೇಂಡ್ಸ್ ಗ್ರೂಪ್ ಇವರ ವತಿಯಿಂದ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಗಣಪತಿಯನ್ನು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ವೀಕ್ಷಿಸಿದರು.
ಕಳೆದ 33 ವರ್ಷಗಳಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಗಣಪಗಳನ್ನು ಪ್ರತಿಷ್ಠಾಪಿಸಿ ಕ್ರೀಡಾಪಟುಗಳಲ್ಲಿ ಉತ್ಸವ ತುಂಬುತ್ತಿರುವ ಆಯೋಜಕರನ್ನು ಅಭಿನಂದಿಸಿದರು.
ಇದೇ ವೇಳೆ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರರಾದ ಎಸ್.ಎಸ್.ಮಲ್ಲಿಕಾರ್ಜುನ್, ಉದ್ಯಮಿ ಅಥಣಿ ವೀರಣ್ಣ, ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವನಿತಾ ಸಮಾಜದ ಲತಿಕಾ ಶೆಟ್ಟಿ, ಸಂಘದ ಶಿವಗಂಗಾ ಶ್ರೀನಿವಾಸ್, ಹೆಚ್.ಮಹಾದೇವ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ಶಿವಕುಮಾರ್, ರಂಗಸ್ವಾಮಿ, ದಿನೇಶ್, ಡಾ|| ಸುರೇಂದ್ರ, ಚಂದ್ರಶೇಖರ್, ವಾದಿರಾಜ್, ಮಂಜಣ್ಣ, ಸುಭಾಷ್, ಸಂದೇಶ್, ಸುರಭಿ ವಿನಯ್, ಪಾಟೀಲ್, ಹಾಲಸ್ವಾಮಿ, ರವಿ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.