ನ್ಯಾಮತಿ : ಮಳೆನಿಂತರು ಮರದ ಹನಿ ನಿಂತಿಲ್ಲಾ ಎನ್ನುವಂತಹ ಪರಿಸ್ಥಿತಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ನಿರ್ಮಾಣವಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನ್ಯಾಮತಿ ತಾಲೂಕಿನ ವಿವಿಧ ಮಳೆಹಾನಿ ಪೀಡಿತ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆಹಾನಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಹೊನ್ನಾಳಿ ತಾಲೂಕಿನಾಧ್ಯಂತ ಈಗಾಗಲೇ ೫೪೬ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿದ್ದು ಅದರಲ್ಲಿ ೩೯೨ ಹಣ ಸಂದಾಯವಾಗಿದ್ದು ಇನ್ನು ೧೫೪ ಫಲಾನುಭವಿಗಳಿಗೆ ಹಣ ಸಂದಾಯವಾಗ ಬೇಕಿದ್ದು ಶೀಘ್ರವಾಗಿ ಅವರಿಗೂ ಹಣ ಪಾವತಿ ಮಾಡಲಾಗುವುದು ಎಂದರು.

ಅದೇ ರೀತಿ ನ್ಯಾಮತಿ ತಾಲೂಕಿನಲ್ಲಿ ೫೨೪ ಮಂಜುರಾತಿ ಆದೇಶ ಪತ್ರ ನೀಡಿದ್ದು ಅದರಲ್ಲಿ ೧೭೧ ಜನರಿಗೆ ಹಣ ಪಾವತಿಯಾಗಿದ್ದು, ಇನ್ನು ೩೫೩ ಜನರಿಗೆ ಪಾವತಿಯಾಗ ಬೇಕಿದ್ದು ಅದೂ ಕೂಡ ಸದ್ಯದಲ್ಲೇ ಪಾವತಿಯಾಗಲಿದೆ ಎಂದರು.

ಅವಳಿ ತಾಲೂಕಿನಾಧ್ಯಂತ ಹಿಂದೆAದೂ ಕಂಡು ಕೇಳರಿಯದ ರೀತಿಯಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದ್ದು ಅವಳಿ ತಾಲೂಕಿನ ನನ್ನ ಬಂಧುಗಳು, ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಅವಳಿ ತಾಲೂಕಿನಾಧ್ಯಂತ ಕಳೆದೊಂದು ತಿಂಗಳಿನಿAದ ಸುರಿದ ಬಾರೀ ಮಳೆ ಅವಳಿ ತಾಲೂಕಿನ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದರು.

ಅತಿಯಾದ ಮಳೆಯಿಂದಾಗಿ ಕಷ್ಟಪಟ್ಟು ಕಟ್ಟಿದ್ದ ಕನಸಿನ ಸೂರುಗಳು ಧರೆಶಾಯಿಗುತ್ತಿದ್ದು, ಬೆಳೆಗಳು ಮಣ್ಣು ಪಾಲಾಗುವಂತೆ ಮಾಡಿದ್ದು ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.

ಈಗಾಗಲೇ ಮುಖ್ಯಮಂತ್ರಿಗಳೊAದಿಗೆ ಮಾತನಾಡಿದ್ದು ಅವಳಿ ತಾಲೂಕಿಗೆ ಹೆಚ್ಚಿನ ಮಳೆಹಾನಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆAದರು.

ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ : ನ್ಯಾಮತಿ ತಾಲೂಕಿನ ಕೆಂಗಟ್ಟೆ,ಕೋಟೆಹಾಳ್,ಕೋಟೆಹಾಳ್ ವೆಂಕಟೇಶ್ ನಗರ,ಮರಿಗೊಂಡನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡ ಶಾಸಕರು ಅಧಿಕಾರಿಗಳೊಂದಿಗೆ ಮನೆ ಹಾನಿ ಪರಿಶೀಲನೆ ನಡೆಸಿದರಲ್ಲದೇ, ಮನೆ ಕಳೆದುಕೊಂಡರಿಗೆ ಸೂಕ್ತ ಪರಿಹಾರ ಕೊಡಿಸುವ ಬರವಸೆ ನೀಡಿದರು.

ಈ ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರಿದ್ದರು

Leave a Reply

Your email address will not be published. Required fields are marked *