ನ್ಯಾಮತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗೋವಿನಕೋವಿ ವಿದ್ಯಾರ್ಥಿಗಳು 2022-23ನೇ ಸಾಲಿನ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಓಟ,ಖೋಖೋ, ಗುಂಡು ಎಸೆತ ಪ್ರಥಮ ಸ್ಥಾನ ಪಡೆದಿದ್ದಾರೆ.
ನ್ಯಾಮತಿ: 2022-23ನೇ ಸಾಲಿನ ಪಶ್ಚಿಮ ವಲಯ ಮತ್ತ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಹೊನ್ನಾಳಿಯ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ವಲಯ ಮಟ್ಟದ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ: 400 ಮೀ ಓಟ ಪ್ರಥಮ ಸ್ಥಾನ, 1500 ಮೀ ಓಟ ದ್ವೀತಿಯ ಸ್ಥಾನ, ಹಾಗೂ ಖೋಖೋ ವಿಭಾಗದಲ್ಲಿಯು ಸಹ ಪ್ರಥಮ ಸ್ಥಾನ ಪಡೆದಿದ್ದು.
ವಲಯ ಮಟ್ಟದ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ: ಗುಂಡು ಎಸೆತ ಪ್ರಥಮ ಸ್ಥಾನ, ಹಾಗೂ ಖೋಖೋ ವಿಭಾಗದಲ್ಲಿಯು ಪ್ರಥಮ ಸ್ಥಾನವನ್ನು ಸಹ ಪಡೆದ್ದಿದಾರೆ.
ತಾಲೂಕು ಮಟ್ಟದ ಬಾಲಕರ ವಿಭಾಗ: ಖೋಖೋ ಪ್ರಥಮ ಸ್ಥಾ£,400ಮೀ ಓಟ ತೃತೀಯ, 1500ಮೀ ಓಟ ತೃತೀಯ.
ತಾಲೂಕು ಮಟ್ಟದ ಬಾಲಕಿಯರ ವಿಭಾಗ: ಖೋಖೋ ವಿಭಾಗದಲ್ಲಿ ಪ್ರಥಮ ಸ್ಥಾನ, ಗುಂಡು ಎಸೆತ ತೃತೀಯ ಸ್ಥಾನವನ್ನು ಮತ್ತು ಪ್ರಶಸ್ಥಿ ಪಡೆದ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಇಂದು ಗೋವಿನಕೋವಿ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಿ.ಬಿ ಶಂಕರ್‍ಮೂರ್ತಿಯವರು ನಡೆಸಿಕೊಟ್ಟರು.
ಮುಖ್ಯಶಿಕ್ಷಕರಾದ ಲೀಲಾ.ಸಿರವರಯ ಮಾತನಾಡಿ ಕ್ರೀಡಾಕೂಟದಲ್ಲಿ ಗೆದ್ದು ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಜಿಲ್ಲಾ ಮಟ್ಟದಲ್ಲಿಯು ಸಹ ಪ್ರಥಮ ಸ್ಥಾನ ಪಡೆಯುವಂತೆ ಮಕ್ಕಳಿಗೆ ಉತ್ತೇಜಿಸಿದರು.
ಉಪಸ್ಥಿತಿಯಲ್ಲಿ:- ಮುಖ್ಯಶಿಕ್ಷಕರಾದ ಲೀಲಾ.ಸಿ, ಎಸ್.ಡಿಎಂ.ಸಿ ಸದಸ್ಯರಾದ ರುದ್ರೇಶ್ ವಿ.ಹೆಚ್, ಮುಖಂಡರಾದ ರಮೇಶ್, ಸತೀಶ್, ದೈಹಿಕ ಶಿಕ್ಷಕರಾದ ಕೆ ಜೀನಹಳ್ಳಿ, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು, ಮತ್ತು ಶಾಲಾ ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.