ನ್ಯಾಮತಿ ಸಮೀಪದ ದೊಡ್ಡೇತ್ತಿನಹಳ್ಳಿ ಗ್ರಾಮದ ತಾಲ್ಲೂಕು ಕಸಾಪ ನಿರ್ದೇಶಕಜೆ.ಪಿ.ಚಂದನ್‍ಅವರ ಮನೆಯ ಮೇಲೆ ಮಂಗಳವಾರ ಕನ್ನಡ ಧ್ವಜ ಆರೋಹಣ ಕಾರ್ಯಕ್ರಮವನ್ನು ಪಿಎಸ್‍ಐ ಪಿ.ಎಸ್.ರಮೇಶ, ಡಾ.ರೇಣುಕಾನಂದ ಮೆಣಸಿನಕಾಯಿ, ನಿವೃತ್ತ ಉಪತಹಶೀಲ್ದಾರ್ ಎನ್.ನಾಗರಾಜ,ಕಸಾಪಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ನೆರವೇರಿಸಿದರು.
ಅನ್ಯ ಭಾಷಿಕರಜೊತೆಯಲ್ಲಿಕನ್ನಡ ಭಾಷೆಯಲ್ಲಿ ವ್ಯವಹರಿಸಿ
ದೊಡ್ಡೇತ್ತಿನಹಳ್ಳಿ(ನ್ಯಾಮತಿ)
ರಾಜ್ಯದಲ್ಲಿಅನ್ಯ ಭಾಷಿಕರಜೊತೆಕನ್ನಡದಲ್ಲಿಯೇ ಮಾತನಾಡಿ ವ್ಯವಹರಿಸುವ ಮೂಲಕ ಅವರಲ್ಲಿಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡುವಂತೆ ಮಾಡುವ ಕೆಲಸ ಮೊದಲುಆಗಬೇಕಿದಎಂದು ಪಿಎಸ್‍ಐ ಪಿ.ಎಸ್.ರಮೇಶ ತಿಳಿಸಿದರು.
ಸಮೀಪದ ದೊಡ್ಡೇತ್ತಿನಹಳ್ಳಿ ಗ್ರಾಮದತಾಲ್ಲೂಕು ಕಸಾಪ ನಿರ್ದೇಶಕಜೆ.ಪಿ.ಚಂದನ್‍ಅವರ ಮನೆಯ ಮೇಲೆ ಮಂಗಳವಾರ ಪ್ರತಿಯೊಬ್ಬರ ಮನೆಯ ಮೇಲೆ ಕನ್ನಡಧ್ವಜ ಹಾರಿಸುವ ಕಸಾಪ ಅಭಿಯಾನದಲ್ಲಿಕನ್ನಡಧ್ವಜಆರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯಷ್ಟು ಸುಲಲಿತವಾದ ಭಾಷೆ ಬೇರೆಇಲ್ಲ. ಕನ್ನಡ ಉಳಿಸಿ ಬೆಳಸುವ ನಿಟ್ಟಿನಲ್ಲಿಯುವಕರು, ಕನ್ನಡಾಭಿಮಾನಿಗಳು ಹೆಚ್ಚು ಗಮನಹರಿಸುವಂತೆ ಮನವಿ ಮಾಡಿದರು.ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಹುದ್ದೆಗಳನ್ನು ಪಡೆಯಬಹುದುಎಂದು ಸಲಹೆ ನೀಡಿದರು.
ತಾಲ್ಲೂಕು ಕಸಾಪ ಮನೆ ಮನೆಯ ಮೇಲೆ ಕನ್ನಡಧ್ವಜ ಹಾರಿಸುವಉದ್ದೇಶ ಹೊಂದರುವುದು ಶ್ಲಾಘನೀಯಎಂದರು.
ನಿವೃತ್ತ ಉಪತಹಶೀಲ್ದಾರ್ ಎನ್. ನಾಗರಾಜ ಮಾತನಾಡಿ, ತಾಲ್ಲೂಕಿನಲ್ಲಿ ಕಸಾಪ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಕನ್ನಡ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಮನವಿ ಮಾಡಿದರು.
ಕಸಾಪ ಅಧ್ಯಕ್ಷಡಿ.ಎಂ. ಹಾಲಾರಾಧ್ಯ ಮಾತನಾಡಿ, ಶಾಶ್ವತಕನ್ನಡಧ್ವಜಸ್ತಂಭ ಮೊದಲುಗ್ರಾಮದಲ್ಲಿಆಗಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬರುಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಾಗುವಂತೆ ಮನವಿ ಮಾಡಿ, ಮನೆಗಳ ಮೇಲೆ ಕನ್ನಡಧ್ವಜ ಹಾರಿಸಲುಇಚ್ಚಿಸುವವರು ಕಸಾಪ ಸಹಕರಿಸುತ್ತದೆಎಂದರು.
ಪ್ರಧಾನ ಕಾರ್ಯದರ್ಶಿ ಬಿ.ಜಿ.ಚೈತ್ರಾಅವರು ಮಾತನಾಡಿ, ಹೊಸದಾಗಿ ಸದಸ್ಯರಾಗ ಬಯಸುವವರಿಗೆ ಮೊಬೈಲ್‍ನಲ್ಲಿ ನೊಂದಣಿ ಮಾಡಲುತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿ ವಂದಿಸಿದರು.
ಸಮುದಾಯ ಆಸ್ಪತ್ರೆಡಾ. ರೇಣುಕಾನಂದ ಮೆಣಸಿನಕಾಯಿ, ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ, ಕೋಶಾಧ್ಯಕ್ಷ ಬಸವರಾಜ, ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ, ನಿರ್ದೇಶಕರಾದ ಡಿ.ಎಂ.ವಿಜೇಂದ್ರ ಮಹೇಂದ್ರಕರ, ಚಂದ್ರೇಗೌಡ, ಜೆ.ಪಿ.ಚಂದನ, ಬಂಡಿಈಶ್ವರಪ್ಪ, ವೆಂಕಟೇಶನಾಯ್ಕ, ತೀರ್ಥಪ್ಪ, ಕುಬೇರಪ್ಪ, ಜಗಧೀಶ, ಸರ್ಕಾರಿಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತುಗ್ರಾಮಸ್ಥರು ಪಾಲ್ಗೊಂಡಿದ್ದರು.