ನ್ಯಾಮತಿ ಃ ಹಸಿರೆ ಉಸಿರು ಎಂದು ತಮ್ಮ ಬದುಕು ಸಮರ್ಪಣೆ ಮಾಡಿಕೊಂಡ ಸಾಲು ಮರದ ತಿಮ್ಮಕ್ಕ ಇವರು ಸಸಿಗಳನ್ನು ನೆಟ್ಟು ಸಾಧನೆ ಮಾಡಿದ್ದಾರೆಂದು ಇದು ನಮ್ಮೆಲ್ಲರಿಗೂ ಆದರ್ಶವಾಗಬೇಕೆಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನ್ಯಾಮತಿ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿ ಶನಿವಾರ ಶ್ರೀ ಬೇಡರ ಕಣ್ಣಪ್ಪ ಸೇವಾ ಸಮಿತಿ, ನ್ಯಾಮತಿ ತಾಲೂಕು ವಾಲ್ಮೀಕಿ ನಾಯಕ ಸಮಾಜ, ಭಾರತೀಯ ಅಯ್ಯಪ್ಪ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೫೩ನೇ ವರ್ಷದ ಗಣೇಶೋತ್ಸವ, ಅನನ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನ್ಯಾಮತಿ, ಹೊನ್ನಾಳಿ ತಾಲೂಕಿನ ಜನತೆ ಮನೆ ಮುಂದೆ ಎರೆಡೆರಡು ಸಸಿಗಳನ್ನು ನೆಟ್ಟು ಬೆಳೆಸಬೇಕು, ಇದರಿಂದ ಸಾಲು ಮರದ ತಿಮ್ಮಕ್ಕನನ್ನು ಕರೆಸಿದ್ದಕ್ಕೆ ಸಾರ್ಥಕವಾಗುತ್ತದೆ. ಕಾಡುಗಳು ಇಲ್ಲ ಎಂದರೆ ಮಳೆ ಇಲ್ಲ. ಕಳೆದ ೩ವರ್ಷಗಳಿಂದ ಅತಿಯಾದ ಮಳೆಯಿಂದ ಜಲ ಪ್ರಳಯವಾಗುತ್ತಿದೆ. ಇಡೀ ಬೆಂಗಳೂರು ಜಲ ಪ್ರಳಯವಾಗಿದೆ. ಸಾಲು ಮರದ ತಿಮ್ಮಕ್ಕನವರು ನಮಗೆಲ್ಲ ಆದರ್ಶ, ನಮ್ಮ ಸರ್ಕಾರ ಸಾಲು ಮರದ ತಿಮ್ಮಕ್ಕನವರಿಗೆ ಕ್ಯಾಬಿನಟ್‌ನಲ್ಲಿ ಸ್ಥಾನ ಮಾನ ಕೊಟ್ಟು ಕಛೇರಿ ಕಾರು, ಗನ್‌ಮ್ಯಾನ್ ನೀಡಲಾಗಿದೆ. ಮಾದನಬಾವಿ ತ್ರಿಪಾರ್ಕ್ನ ಉದ್ದಾನವನಕ್ಕೆ ಸಾಲು ಮರದ ತಿಮ್ಮಕ್ಕನವರ ಹೆಸರನ್ನು ನಾಮಕರಣ ಮಾಡುತ್ತೇನೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ನಾಡೋಜ ಡಾ.ಸಾಲು ಮರದ ತಿಮ್ಮಕ್ಕ ಇವರಿಗೆ ಗೌರವ ಸಮರ್ಪಣೆ ಮಾಡಿ ಸನ್ಮಾನಿಸಲಾಯಿತು. ನ್ಯಾಮತಿ ತಹಶೀಲ್ದಾರ್ ಎಂ.ರೇಣುಕಾ, ಸುರೇಂದ್ರಗೌಡರು, ಬಳ್ಳೂರು ಉಮೇಶ್, ಎನ್.ನಾಗರಾಜ್, ಎಂ.ಸಿ.ಪ್ರಿಯಾAಕ ರಮೇಶ್, ಪಿ.ಎಸ್‌ಐ.ರಮೇಶ್, ಮಾತನಾಡಿದರು.
ನ್ಯಾಮತಿ ತಿಮ್ಮಜ್ಜಿ ಹಾಲಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನ್ಯಾಮತಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ಸೋಮಶೇಖರ್, ಪ.ಪಂ.ಮುಖ್ಯಾಧಿಕಾರಿ ಕೊಟ್ರೇಶ್, ಬಗರ್‌ಹುಕುಂ ಸದಸ್ಯ ಕರಿಬಸಪ್ಪ, ಗ್ರಾ.ಪಂ.ಮಾಜಿ ಸದಸ್ಯ ಬುಡ್ಡಪ್ಪ, ನುಚ್ಚಿನ ವಾಗೀಶ್, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ ಮತ್ತಿತರರಿದ್ದರು.