ಹುಣಸಘಟ್ಟ: ಓದಿನ ಜೊತೆಗೆ ಮಕ್ಕಳ ಪ್ರತಿಭೆಗಳ ಅನಾವರಣವು ಆಗಬೇಕು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತೇವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ ತಿಪ್ಪೇಶಪ್ಪ ನವರು ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕುಳಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಸಾಲಿನ ಸಾಸ್ವೆಹಳ್ಳಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು ಇಲ್ಲಿ ಆರೋಗ್ಯಕರವಾಗಿ ಸ್ಪರ್ಧೆಗಳು ನಡೆಯುತ್ತವೆ. ಕೇವಲ ಪ್ರಶಸ್ತಿ ಪುರಸ್ಕಾರಕ್ಕಾಗಿ ಅಲ್ಲ. ಎಷ್ಟೋ ಮಕ್ಕಳಿಗೆ ತಮ್ಮಲ್ಲಿನ ಪ್ರತಿಭೆ ಅರಿವು ಇರುವುದಿಲ್ಲ. ಅವರ ಪ್ರತಿಭೆಯನ್ನು ಅವರಿಗೆ ತಿಳಿಯುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಪ್ರತಿಭೆಗಳಿಗೆನೂ ಕೊರತೆಯಿಲ್ಲ. ಆದರೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಮಕ್ಕಳು ಭಯಪಡುತ್ತಾರೆ. ಮಕ್ಕಳಲ್ಲಿನ ವೇದಿಕೆಯ ಭಯವನ್ನು ಹೋಗಲಾಡಿಸಲು ಶಿಕ್ಷಣ ಇಲಾಖೆಯ ಈ ಪ್ರತಿಭಾ ಕಾರಂಜಿಯು ಸಹಕಾರಿಯಾಗಿದೆ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮಕ್ಕಳು ಮುಂದೆ ಭಾರತದ ನಿರ್ಮಾತೃ ಗಳಾಗುತ್ತಾರೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ ನೀಡಿ ಮಾತನಾಡಿ ಇಂದು ಮಕ್ಕಳು ವಿಶೇಷವಾದ ವೇಷಭೂಷಣಗಳನ್ನು ತೊಟ್ಟು ಲವಲವಿಕೆಯಿಂದ ಸಂಭ್ರಮಿಸುತ್ತಿದ್ದಾರೆ.ಅವರು ಲವಲವಿಕೆಯಿಂದ ಇರುವಂತಹ ಪ್ರತಿಭಾಕಾರಂಜಿಯು ಮಕ್ಕಳಲ್ಲಿ ಇನ್ನಷ್ಟು ಆಸಕ್ತಿಯನ್ನು ಉಂಟು ಮಾಡುವ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ. ಇಂದು ನಮ್ಮ ಕ್ಲಸ್ಟರ್ ಹಂತವನ್ನು ದಾಟಿ ತಾಲೂಕು ಜಿಲ್ಲಾ ರಾಜ್ಯಮಟ್ಟದಲ್ಲಿ ನಿಮ್ಮ ಸಾಧನೆಯ ಪ್ರತಿನಿಧಿಸಿ ತಂದೆ-ತಾಯಿಗಳಿಗೆ ಶಿಕ್ಷಕರಿಗೆ ನಾಡಿಗೆ ಹೆಸರು ತರುವಂತರಾಗಿ ಎಂದರು.
ಸಿ ಆರ್ ಪಿ ಕಾಳಾಚಾರ್ ಮಾತನಾಡಿ ಪ್ರತಿಭಾಕಾರಂಜಿಯಲ್ಲಿ ಕ್ಲಸ್ಟರ್ ನ ಎಚ್ ಪಿ ಎಸ್ ಹಾಗೂ ಎಲ್ ಪಿ ಎಸ್ ನ 16 ಶಾಲೆಗಳ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಘು ಸಂಗೀತ ಛದ್ಮ ವೇಷ, ಕಥೆ ಹೇಳುವುದು ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಇ ಸಿ ಓ ರಾಜಶೇಖರ್ ಗ್ರಾ ಪಂ ಅಧ್ಯಕ್ಷಚಂದ್ರಪ್ಪ, ಬಿ ಆರ್ ಪಿ ಅರುಣ್ ಕುಮಾರ್, ಸಮನ್ವಯ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಮುಖ್ಯಶಿಕ್ಷಕ ರಂಗನಾಥ್ ಬಗರುಕುಂ ಸಮಿತಿ ನಿರ್ದೇಶಕ ಮಹಾಂತೇಶ್, ಸಲಹಾ ಸಮಿತಿ ಸದಸ್ಯರು ಗ್ರಾಮ ಪಂ ಸದಸ್ಯರು ಪೋಷಕರು ಉಪಸ್ಥಿತರಿದ್ದರು.