ಹೊನ್ನಾಳಿ : ಮಳೆಯಿಂದಾದ ಮನೆಯಾಗಿ ಪೀಡಿತ ಗ್ರಾಮಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹೊಳೆಮಾದಾಪುರ, ಬಿದರಗಡ್ಡೆ, ದಿಡಗೂರು, ದಿಡಗೂರು ಎಕೆ ಕಾಲೋನಿ, ಹರಳಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಮಳೆಹಾನಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಶಾಸಕರು, ಅವಳಿ ತಾಲೂಕಿನಾಧ್ಯಂತ ಕಳೆದ ಕೆಲ ದಿನಗಳಿಂದ ಸುರಿದ ಅತಿಯಾದ ಮಳೆಯಿಂದಾಗಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದು ಈಗಾಗಲೇ ಅವುಗಳಿಗೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಅದೇ ರೀತಿ ಅವಳಿ ತಾಲೂಕಿನಲ್ಲಿ ಇನ್ನು ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು ಅಧಿಕಾರಿಗಳಿಗೆ ವರದಿ ಸಿದ್ದ ಪಡಿಸಲು ಸೂಚನೆ ನೀಡಿದ್ದು ಅವುಗಳಿಗೆ ಆದಷ್ಟು ಬೇಗ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು ಎಂದರು.
ಅದೇ ರೀತಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನೀರು ಪಾಲಾಗಿದ್ದು ಯಾವುದೇ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಅವರಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದರು.
ನಾನು ಜೆಸಿಬಿಯಿಂದ ಮನೆ ಕೆಡವಿ ಎಂದು ಹೇಳಿಲ್ಲಾ, ಯಾವುದೇ ಪಾರ್ಟಿ ಪಕ್ಷ ಎಂದು ನೋಡಿಲ್ಲಾ ಎಲ್ಲರೂ ನಮ್ಮವರೂ ಯಾರು ಮನೆ ಕಳೆದು ಕೊಂಡಿದ್ದಾರೋ ಅವರಿಗೆ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಅತಿವೃಷ್ಟಿಯಲ್ಲಿ ನಾನು ರಾಜಕೀಯ ಮಾಡಿಲ್ಲಾ, ರಾಜಕೀಯ ಮಾಡಲು ಬೇರೆ ವೇದಿಕೆ ಇದೇ ಎಂದ ಶಾಸಕರು, ಜನರ ಸಂಕಷ್ಟದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲಾ, ಮಾಡುವುದಿಲ್ಲಾ ಎಂದರು.
ಮಳೆಯಿಂದಾಗಿ ಯಾರ್ಯಾರು ಮನೆ ಕಳೆದುಕೊಂಡಿದ್ದಾರೋ ಅವರಿಗೆಲ್ಲಾ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದು ನನ್ನ ಕರ್ತವ್ಯ ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.