ನ್ಯಾಮತಿ: ಪಟ್ಟಣದ ಮಾಹಂತೇಶ್ ಕಲ್ಯಾಣ ಮಂಟಪದಲ್ಲಿ ಇಂದು ದಾವಣಗೆರೆ ಎಸ್ ಎಸ್ ಮಲ್ಲಿಕಾರ್ಜುನ್ ರವರ 55ನೇ ಹುಟ್ಟು ಹಬ್ಬದ ಅಂಗವಾಗಿ ನ್ಯಾಮತಿ ತಾಲೂಕು ಕಾಂಗ್ರೇಸ್ ಪಕ್ಷದ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಇದರ ಉದ್ಗಾಟನೆಯನ್ನು ಶ್ರೀಮತಿ ಪ್ರಭಾಮಲ್ಲಿಕಾರ್ಜುನ್‍ರವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಶ್ರೀಮತಿ ಪ್ರಭಾಮಲ್ಲಿಕಾರ್ಜುನ್‍ರವರು ಮಾತನಾಡಿ ಸುಮಾರು ಒಂದೇ ದಿನದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ 5550 ರಕ್ತದಾನಿಗಳಿಂದ ರಕ್ತದಾನವನ್ನು ಸಂಗ್ರಹಿಸಲು ತ್ರಿರ್ಮಾನಿಸಲಾಗಿತ್ತು, ಇಷ್ಟೊಂದು ರಕ್ತÀ ಸಂಗ್ರಹಿಸಿ ಇಡಲು ಸಾದ್ಯವಾಗದ ಕಾರಣ ಈ ತಿಂಗಳ ಅಂತ್ಯದ ಒಳಗೆ ರಕ್ತದಾನ ಶಿಬಿರವನ್ನು ಮಾಡಿ ರಕ್ತವನ್ನು ಸಂಗ್ರಹಿಸಿ, ರಕ್ತದಾನ ಮಾಡಿದವರಿಗೆ ಮತ್ತು ಅವರ ಕುಟುಂಬಕ್ಕೆ ರಕ್ತದ ಅವಶ್ಯಕತೆ ಇದಲ್ಲಿ ಅವರಿಗೆ ನಮ್ಮ ಬಾಪೂಜಿ ಆಸ್ಪತ್ರೆಯ ವತಿಯಿಂದ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಸ್ತಾವಿಕ ನುಡಿಯನ್ನು ಜಿಲ್ಲಾ ಕಾಂಗ್ರೇಸ್ ಪಕ್ಷದ ಮುಖಂಡರಾದ ಪರುಶುರಾಮಪ್ಪನವರು ನಡೆಸಿಕೊಟ್ಟು ನಂತರ ಮಾತನಾಡಿ ಎಂ.ಬಿಎ ಕಾಲೇಜ್ ಆವರಣದಲ್ಲಿ ಗುರುವಾರ 22-9-2022 ರಂದು ನಮ್ಮ ನಾಯಕರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರ ಹುಟ್ಟುಹಬ್ಬಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳೆ, ಸಲೀಂ ಹಮ್ಮದ್, ರಾಮಲಿಂಗರೆಡ್ಡಿ, ಎಂ.ಬಿ ಪಾಟೀಲ್, ಜಮೀರ್ ಅಹಮ್ಮದ್, ಕಾಂಗ್ರೇಸ್ ಪಕ್ಷದ ಘಠಾನು ಘಟಿ ನಾಯಕರು ಮತ್ತು ಸುಮಾರು 50 ಸಾವಿರ ಪಕ್ಷದ ಕಾರ್ಯಕರ್ತರುಗಳು ಸಹ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ನಂತರ ಮಾತನಾಡಿ ಎಸ್.ಎಸ್ ಮಲ್ಲಿಕಾರ್ಜುನ್ ರವರು ದಾವಣಗೆರೆಗೆ ಮಾತ್ರ ಸೀಮಿತವಲ್ಲ ಅವರು ಜಿಲ್ಲಾ ನಾಯಕರಾಗಿದ್ದಾರೆ ಹಾಗಾಗಿ ಅವರ 55ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡಲಾಗುವುದು ಎಂದರು.
ಉಪಸ್ಥಿಯಲ್ಲಿ:-ಎಸ್.ಎಸ್ ಹೈಟೆಕ್ ಆಸ್ಪತ್ರೇಯ ಪ್ರಾಂಶುಪಾಲರಾದ ಬಿ.ಎಸ್ ಪ್ರಸಾದ್, ಡಾ ಶಾಂತಲಾ, ಕೆ.ಎಲ್ ಹರೀಶ್, ತಾಲೂಕು ಮತ್ತು ನಗರ ಘಟಕದ ಕಾಂಗ್ರೇಸ್ ಪಕ್ಷದ ಅಧ್ಯಕ್ಷರುಗಳಾದ ವಾಗೀಶ್ ನುಚ್ಚಿನ್, ಲೋಕÀಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಿ.ಜಿ ವಿಶ್ವನಾಥ್, ಶಿವರಾಮ್ ನಾಯ್ಕ್, ಕುಮಾರ್ ನುಚ್ಚಿನ್, ಕರಿಬಸಣ್ಣ, ರೆಡ್ಡಿ ಸುರೇಶ್, ಉಮೇಶ್, ಅಮೀತ್, ಮಧುಗೌಡ, ಮಂಜು, ಸುನೀಲ್‍ಕುಮಾರ್, ಇನ್ನೂ ಮುಂತಾದ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಾಪೂಜಿ ವಿದ್ಯಾಸಂಸ್ಥೆಯ ರಕ್ತನಿಧಿಯ ವೈದ್ಯರು ಮತ್ತ ದಾದಿಯರು ಸಹ ಬಾಗಿಯಾಗಿದ್ದರು.