ರೈತರ ಗ್ರಾಹಕರ ವಿರೋಧಿ ವಿದ್ಯುತ್ ತಿದ್ದುಪಡಿ ಮಾಸುದೆ ಕಾಯ್ದೆಯನ್ನು ಜಾರಿಗೆ ತರಬಾರದೆಂದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ.
ನ್ಯಾಮತಿ: ಕೇಂದ್ರ ಸರ್ಕಾರ ಈ ಹಿಂದೆ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ದೆಹಲಿಯಲ್ಲಿ 1ವರ್ಷ 4ತಿಂಗಳು ರೈತರ ಧೀರ್ಘಕಾಲದ ಪ್ರತಿಭಟನೆಯ ಪರಿಣಾಮ ವಾಪಾಸ್ಸು ಪಡೆದಿದೆ. ಆ ಸಂದರ್ಭದಲ್ಲಿ ರೈತರ, ಜನಸಮಾನ್ಯರ ವಿರೋಧಿ ಕಾಯ್ದೆಯದಂತಹ ವಿದ್ಯುತ್‌ಖಾಸಗೀಕರಣ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದು ರೈತ ಮುಖಂಡರಿಗೆ ಆಶ್ವಾಸನೆ ಕೊಟ್ಟಿತ್ತು, ಆದರೆ ಈಗ ಲೋಕಸಭೆಯಲ್ಲಿ ವಿದ್ಯುತ್‌ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಸ್ಥಾಯಿ ಸಮಿತಿಗೆ ಒಪ್ಪಿಸಿ ಮತ್ತೆ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಹಾಗಾಗಿ ಈ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ರೈತ ಚಳುವಳಿಗಳು ನಡೆಯುತ್ತಿವೆ. ಆದರೂ ಸಹ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ.
ಈ ಮಸೂದೆ ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆ ಉಪಗುತ್ತಿಗೆ ಹಾಗೂ ಪ್ರಾಂಚಾಯಿಸಿಗೆ ಆವಕಾಶವಿದೆ. ಈ ಮೂಲಕ ವಿದ್ಯುತ್‌ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದೇ ತಿದ್ದುಪಡಿಯ ಉದ್ದೇಶವಾಗಿದೆ. ಈ ಮಸೂದೆ ತಿದ್ದುಪಡಿ ರೈತರಿಗೆ, ಗ್ರಾಹಕರಿಗೆ ಮರಣ ಶಾಸನವಾಗಿದೆ. ವಿದ್ಯುತ್‌ಪೂರೈಕೆ ಖಾಸಗೀಕರಣಗೊಂಡರೆ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್ ಸೆಟ್, ಬೀದಿ ದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್‌ಬಂದ್‌ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಕಾರ್ಯಕ್ರಮದಡಿಯಲ್ಲಿ ಪರಿಹಾರ ನೀಡಿ ದರೆ ಪಡೆಯಬೇಕಾಗುತ್ತದೆ. ಈ ಹಿಂದೆ ಜನರು ಬಳಸುವ ಅಡುಗೆ ಅನಿಲಕ್ಕೆ ನಂತರ ಸಬ್ಸಿಡಿ ಕೊಡುವುದಾಗಿ ತಿಳಿಸಿ, ಈಗ ಕೊಡದೆ ಮೋಸ ಮಾಡುತ್ತಿರುವರು ಈಗಾಗಲೆ: ಎಲ್ಲರಿಗೂ ಗೊತ್ತಿರುವ ವಿಚಾರ, ರೈತರು ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರಿಪೇಡ್ ಶುಲ್ಕ ಪಾವತಿಸಿ ಜನರು ಮೊಬೈಲ್ ಬಳಸುವ ಹಾಗೆ ಪಂಪ್ ಸೆಟ್‌ಗಳಿಗೆ ಮತ್ತು ಇತರೆ ಗ್ರಾಹಕರು ಸಹ ವಿದ್ಯುತ್‌ಶಕ್ತಿ ಬಳಸಬೇಕಾಗುತ್ತದೆ ಎಂದು ಆರೋಪಿಸಿ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕು ಜಾರಿಗೆ ತರಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲುಪಿಸುವಂತೆ ಮಾನ್ಯ ಉಪವಿಭಾಗಾಧಿಕಾರಿಗಳಾದ ಹುಲ್ಲು ಮನೆ ತಿಮ್ಮಣ್ಣರವರಿಗೆ ಮನವಿ ಪತ್ರ ಕೊಡುವುದರ ಮೂಲಕ ಒತ್ತಾಯಿಸಿದರು.

Leave a Reply

Your email address will not be published. Required fields are marked *