ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಹರಿಹರದಲ್ಲಿ 18 ರಿಂದ 35 ವರ್ಷದೊಳಗಿನ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಐ.ಟಿ.ಐ, ಡಿಪೆÇ್ಲೀಮ ಮೆಕಾನಿಕಲ್, ಬಿ.ಇ ಮೆಕಾನಿಕಲ್ ಮತ್ತು ಯಾವುದೇ ಪದವಿ ಪಾಸ್ ಆಗಿರುವ ಆಭ್ಯರ್ಥಿಗಳಿಗೆ ಆಟೋಮೇಷನ್ ಅಂಡ್ ಕಂಟ್ರೋಲ್, ಇಂಟರ್‍ನೆಟ್ ಆಪ್ ಥಿಂಗ್ (Ioಖಿ), ರಿವರ್ಸ್ ಇಂಜಿನಿಯಂಗ್, 3ಡಿ ಪ್ರಿಂಟಿಂಗ್ (ಖPಖಿ), ವ್ಯಾಲಿಡೇಷನ್ ಲ್ಯಾಬ್, ಸಿ.ಎನ್.ಸಿ, ಮ್ಯಾನುಫ್ಯಾಕ್ಚರಿಂಗ್ ಅಂಡ್ ಮಷಿನಿಂಗ್, ರಿಯಾಲಿಟಿ ಲ್ಯಾಬ್, ಪೆÇ್ರಡಕ್ಟ್ ಡಿಸೈನ್ ಅಂಡ್ ಡೆವಲಪ್‍ಮೆಂಟ್, ಸಿ.ಎಸ್.ಸಿ ಆಪರೇಟರ್ ಟನಿರ್ಂಗ್, ಸಿ.ಎನ್.ಸಿ ಪೆÇ್ರೀಗ್ರಾಮರ್, ಸಿ.ಎನ್.ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಸಿ.ಎನ್.ಸಿ ಪೆÇ್ರೀಗ್ರಾಮಿಂಗ್ ಮತ್ತು ಆಪರೇಷನ್ ಟರ್ನರ್, ಮಿಲ್ಲರ್, ಗ್ರೈಂಡರ್, ಡಿಸೈನರ್-ಮೆಕಾನಿಕಲ್, ಪೆÇ್ರಡಕ್ಷನ್ ಇಂಜಿನಿಯರ್(ಅಂಆ-ಅಂಒ), ಟೂಲ್ ರೂಮ್ ಮಷಿನಿಷ್ಟ್ ಕೋರ್ಸ್‍ಗಳಲ್ಲಿ ಅಲ್ಪಾವಧಿ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಈ ತರಬೇತಿಯ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ತರಬೇತಿ ಮುಗಿದ ನಂತರ ಉದ್ಯೋಗವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಅರ್ಜಿ ಸಲ್ಲಿಸಲು ಸೆ.26 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, 22 ಅ & ಆ ಏIಂಆಃ, ಇಂಡಸ್ಟ್ರಿಯಲ್ ಏರಿಯ ಹರ್ಲಾಪರ, ಏSಖಖಿಅ ಡಿಪೋ ಹತ್ತಿರ ಹರಿಹರ, ಪೋನ್ ನಂ 08192-243937, 9916018111, 8711913947 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.