ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆ,ಏಕಾಗ್ರತೆ, ಸತತ ಪರಿಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು. ಆಗ ಅವರ ಚಿಂತನಾ ಶಕ್ತಿ ಬೆಳವಣಿಗೆಯಾಗುತ್ತದೆ ಅದು ಅವರ ಭವಿಷ್ಯವನ್ನು ಕಟ್ಟಿಕೊಡುತ್ತದೆ ಎಂದು ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ  ಜಿ ಆರ್ ಷಣ್ಮುಖಪ್ಪ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅತ್ತಿಗೆರೆಯ ಪಟೇಲ್ ನಂದಪ್ಪ ಹೊರಟ್ಟಿಗೌಡ್ರು ಕಲ್ಲಪ್ಪ ಪ್ರೌಢ ಶಾಲೆಯಲ್ಲಿ ದಾವಣಗೆರೆಯ ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ  ಕನ್ನಡ ರತ್ನಕೋಶ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಮುಂದುವರಿದು ಮಾತನಾಡುತ್ತಾ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕಾದರೆ ತಾನು ಏನನ್ನಾದರೂ ಎದುರಿಸಬಲ್ಲೆ, ಸಾಧಿಸಬಲ್ಲೆ ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಹಿಡಿದ ಕಾರ್ಯವನ್ನು  ಸಾಧಿಸಲೇಬೇಕೆಂಬ ಛಲವನ್ನು ರೂಡಿಸಿಕೊಳ್ಳಬೇಕು ಮತ್ತು ಗುರಿಯ ಸಾಧನೆಗೆ ಅವಶ್ಯಕವಾದ ಎಲ್ಲ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿರಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ಸೇವೆಗೆ ಸೇರಿದ ಮೊದಲ ಶಾಲೆ ಇದಾಗಿದೆ ಎಂದು ಸ್ಮರಿಸುತ್ತಾ ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ರೂಢಿಸಿಕೊಂಡು ವೈಯಕ್ತಿಕವಾಗಿ ಬೆಳೆಯುವುದಲ್ಲದೆ ಆರೋಗ್ಯಕರವಾದ ಬಲಯುತವಾದ ಸಮಾಜದ ಬೆಳವಣಿಗೆಗೆ ಮುಂದಾಗಬೇಕೆಂದು ತಿಳಿಸಿದರು.
ಲಯನ್ಸ್ ಕ್ಲಬ್  ಅಧ್ಯಕ್ಷರಾದ ಬಿ ದಿಳ್ಯಪ್ಪ ಕ್ಲಬ್ ಬೆಳೆದು ಬಂದ ಬಗೆ ಅದರ  ಉದ್ದೇಶ ತಿಳಿಸಿ ವಿದ್ಯಾರ್ಥಿಗಳು ಅತ್ಯುಪಯುಕ್ತ ಕನ್ನಡ ರತ್ನಕೋಶವನ್ನು ಉಪಯೋಗಿಸಿಕೊಂಡು ಪದ ಸಂಪತ್ತನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ ಜಿ  ನಾಗಪ್ಪ ಮುಖ್ಯೋಪಾಧ್ಯಾಯ ಡಿಕೆ ಷಣ್ಮುಖಯ್ಯ ಎಚ್ ಕೆ ದೇವರಾಜ್ ಲಯನ್ಸ್ ಕ್ಲಬ್ ಸದಸ್ಯರಾದ ಎಚ್ ಎನ್ ಶಿವಕುಮಾರ್, ಎ ಆರ್ ಉಜ್ಜಿನಪ್ಪ, ಎಲ್ ಎಸ್ ಪ್ರಭುದೇವ್, ಅರವಿಂದ್, ಜೆ ಪರಮೇಶ್ವರಪ್ಪ, ಎಸ್ ಆರ್ ಅಜ್ಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕುಮಾರ ಲೋಕೇಶ್ ಬಿ ಪ್ರಾರ್ಥಿಸಿ ಶಿಕ್ಷಕ ಎಸ್ ಆರ್ ಮಲ್ಲಿಕಾರ್ಜುನಯ್ಯ ಸ್ವಾಗತಿಸಿ ಶಿಕ್ಷಕಿ ಸುಜಾತ ಎಸ್ ಕೆ ವಂದಿಸಿದರು ಶಿಕ್ಷಕಿ ಜ್ಯೋತಿ ವೈ ಬಿ  ಕಾರ್ಯಕ್ರಮ ನಿರೂಪಿಸಿದರು
ದತ್ತ ನಿಧಿ: ಪಟೇಲ್ ನಂದಪ್ಪ ಹೊರಟಿಗೌಡ್ರು ಕಲ್ಲಪ್ಪ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ 15000 ರೂಗಳನ್ನು  ದತ್ತಿ ನಿಧಿ ಸ್ಥಾಪಿಸಿದರು.
ದೇಣಿಗೆ: ಶಾಲಾ ಮಕ್ಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಡುಗೆ ಖರೀದಿಗೆ ಜೆ ಪರಮೇಶ್ವರಪ್ಪ ಮತ್ತು ಎಚ್ ಕೆ ದೇವರಾಜ್ ಉದಾರ ದೇಣಿಗೆ ನೀಡಿದರು.

Leave a Reply

Your email address will not be published. Required fields are marked *