ಲಿಂಗಪೂಜೆಯಿಂದ ಮನಸ್ಸಿಗೆ ನೆಮ್ಮದಿ ಶಿರಮಗೊಂಡನಹಳ್ಳಿ ಬಸವಗುರು ತಪೋವನದ ಶಿವಾನಂದ ಗುರೂಜಿ ಹೇಳಿದರು
ಸುರಹೊನ್ನೆ( ನ್ಯಾಮತಿ): ಜಾತಿ ಭೇದವಿಲ್ಲದೇ ಲಿಂಗಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಶಿರಮಗೊಂಡನಹಳ್ಳಿ ಬಸವಗುರು ತಪೋವನದ ಶಿವಾನಂದ ಗುರೂಜಿ ಹೇಳಿದರು.
ಸಮೀಪದ ಸುರಹೊನ್ನೆ ಗ್ರಾಮದಲ್ಲಿ ಶಾಂತಾ ಮತ್ತು ಶಿವರಾಜ ಮುಂಡರಗಿ ಅವರ ಅಂಗಡಿಯ ಮನೆಯಲ್ಲಿ ನಡೆದ 6ನೇ ತಿಂಗಳಿನ ಮಹಾಮನೆ ಕಾರ್ಯಕ್ರಮ ನ್ಯಾಮತಿ ತಾಲೂಕಿನ ಬಸವ ಬಳಗದ ವತಿಯಿಂದ ನಡೆಯಿತು.


ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅದ್ಯಕ್ಷ ಎಂ ಬಿ ಶಿವಯೋಗಿ, ಬಸವ ಬಳಗದ ಗೌರವಾಧ್ಯಕ್ಷ ಯರಗನಾಳ್ ಮಹೇಶ್ವರಪ್ಪ, ಬೆಳಗುತ್ತಿ ಬೋಜರಾಜ, ಮಂಜುಶ್ರೀ ಮುಂಡರಗಿ, ಪೂರ್ಣಿಮಾ ಸಾಲಿ, ಕಸಾ¥ ಸದಸ್ಯರಾದ ಕೆ.ಎಂ. ಬಸವರಾಜ, ಚಂದ್ರೇಗೌಡ, ಡಿ.ಎಂ.ವಿಜೇಂದ್ರ, ಬಂಡಿ ಈಶ್ವರಪ್ಪ ಸಾಲಿ, ಎನ್.ಜೆ. ಶಂಭುಲಿಂಗ ಇದ್ದರು, ಬಸವೇಶ್ವರ ಭಜನಾ ಸಂಘದವರು ವಚನ ಗಾಯನ ನಡೆಸಿಕೊಟ್ಟರು.

Leave a Reply

Your email address will not be published. Required fields are marked *