ಕಳೆದ ನಾಲ್ಕು ತಿಂಗಳಿಂದಲೂ ಮಳೆಯೂ ಬಿಡದೆ ಸುರಿಯುತ್ತಿದ್ದು ರೈತರು ಬಿತ್ತಿದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ನಾಡಕಛೇರಿ ಅಧಿಕಾರಿಗಳು ಮಳೆಗೆ ಬಿದ್ದ ಮನೆಗಳ ವರದಿ ನೀಡುವಲ್ಲಿ ತಾರತಮ್ಯ ಮಾಡದೆ ಪರಿಶೀಲಿಸಿ ವರದಿ ನೀಡಿ ಮನೆ ಬಿದ್ದವರ ಎಲ್ಲರಿಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಮಾಜಿ ಶಾಸಕ ಡಿಜಿ ಶಾಂತನಗೌಡ ಹೇಳಿದರು.
ಮಳೆಗೆ ಬಿದ್ದ ಮನೆಗಳಲ್ಲೂ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂಬ ಕೆಲವು ಗ್ರಾಮದ ಮನೆ ಬಿದ್ದ ಫಲಾನುಭವಿಗಳ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆನಕನಹಳ್ಳಿ, ಬೀರಗೊಂಡನಹಳ್ಳಿ, ಚನ್ನಮುಂಬಾಪೂರ, ಲಿಂಗಾಪುರ ಗ್ರಾಮದ ಬಿದ್ದ ಮನೆಗಳನ್ನು ವೀಕ್ಷಿಸಿ ಕುಟುಂಬದ ಯಜಮಾನರಿಗೆ ಸಾಂತ್ವಾನ ಹೇಳಿ ನಂತರ ಸಾಸ್ವೆಹಳ್ಳಿ ನಾಡಕಛೇರಿ ಗೆ ಭೇಟಿ ನೀಡಿ ಆರ್ ಐ ದಿನೇಶ್ ಬಾಬು, ಉಪತಶೀಲ್ದಾರ್ ಚಂದ್ರಪ್ಪ ನವರಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ ಮಳೆಗೆ ಮನೆ ಕಳೆದುಕೊಂಡವರಿಗೆ ಕಚೇರಿಗೆ ಅಲೆದಾಡಿ ಸಬೇಡಿ ಮನೆ ಬಿದ್ದವರಿಗೆ ಆದಷ್ಟು ಬೇಗ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಕೊಡುತಾಳ್ ರುದ್ರೇಶ್ ಅಪ್ಪಲ್ ರಾಜು, ಹೊಳಲೂರು ಶೇಖರಪ್ಪ, ಗ್ರಾ ಪಂ ಸದಸ್ಯರಾದ ಜಬ್ಬರ್ ಅಲಿಖಾನ್, ಸುಲೇಮಾನ್ ಖಾನ್, ಮಲ್ಲಿಕಟ್ಟೆ ಕಲೀಲ್ ಮೊದಲಾದವರು ಉಪಸ್ಥಿತರಿದ್ದರು.