ನ್ಯಾಮತಿ ತಾಲೂಕು ಚಿನ್ನಿಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಶಶಿಕಲಾ ಓಂಕಾರ್ ಇವರ ಅಧಿಕಾರ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ಆ ತೆರವಾದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಮತಿ ಕವಿತಾ ಬಾಯಿ ಯೋಗೆಶ್ ನಾಯ್ಕ್ ರವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು, ವಿರೋಧಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ರೇವತಿ ಪರಮೇಶ್ವರಪ್ಪ ಸಹ ಅರ್ಜಿ ಸಲ್ಲಿಸಿದ್ದರು, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ 8 ಮತ ಪಡೆದರು, ಬಿಜೆಪಿ ಬೆಂಬಲಿತ ಅಭ್ಯರ್ಥಿ 9 ಮತ ಪಡೆದು, 1 ಮತದ ಅಂತರದಿಂದ ಗೆಲುವನ್ನು ಸಾದಿಸಿದರು ಎಂದು À ಚುನಾವಣಾ ಅಧಿಕಾರಿಯಾದ ಮಂಜುನಾಥ್ ಸ್ವಾಮಿಯವರು ಶ್ರೀಮತಿ ಕವಿತಾ ಬಾಯಿ ಯೋಗೆಶ್ ನಾಯ್ಕ್ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು.
ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಅಭಿನಂಧನೆಯನ್ನು ಸಲ್ಲಿಸಿದರು.
ಉಪಸ್ಥಿತಿಯಲ್ಲಿ:- ಉಪಾಧ್ಯಕ್ಷರಾದ ಲಕ್ಷ್ಮಿ ಮಂಜುನಾಥ್, ಸದಸ್ಯರುಗಳಾದ ಮಹೇಶ್ವರಪ್ಪ, ರಮೇಶ್, ಅಂಬಿಕಾ ರಾಮಚಂದ್ರ, ಮಂಜುಳಾ ಚಂದ್ರಪ್ಪ, ಕಾಂತರಾಜ್, ವೀರೇಶ್ ನಾಯ್ಕ್, ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು, ಬಿಜೆಪಿ ಕಾರ್ಯಕರ್ತರು ಸಹ ಬಾಗಿಯಾಗಿದ್ದರು.