ನ್ಯಾಮತಿ:- ತಾಲೂಕು ಸವಳಂಗ ಗ್ರಾಮ ಪಂಚಯಿತಿಗೆ ಇಂದು ಅಧ್ಯಕ್ಷರ ಗಾದಿಗೆ ಚುನಾವಣೆ ನಡೆಯಿತು. ಆ ಚುನಾವಣೆಗೆ ನಾಮ ಪತ್ರ ಅರ್ಜಿಯನ್ನು ಮಾದಪುರ ಗ್ರಾಮದ ಶ್ರೀಮತಿ ನೇತ್ರಾವತಿ ರುದ್ರೇಶಪ್ಪರವರು ಸಲ್ಲಿಸಿದ್ದರು.
ಬೇರೆ ಯಾವ ಸದಸ್ಯರು ಕೂಡ ಅಧ್ಯಕ್ಷರ ಗಾದಿಗೆ ಅರ್ಜಿಯನ್ನು ಸಲ್ಲಿಸದೆ ಇರುವ ಕಾರಣ ಚುನಾವಣಾ ಅಧಿಕಾರಿಯಾದ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಸ್ವಾಮಿಯವರು ಬಿ.ಜೆ.ಪಿ ಬೆಂಬಲಿತ ಅಭ್ಯರ್ಥೀಯಾದ ಶ್ರೀಮತಿ ನೇತ್ರಾವತಿ ರುದ್ರೇಶಪ್ಪನವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾಂiÀರ್iದರ್ಶಿ ಹಾಗೂ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ನೂತನ ಅಧ್ಯಕ್ಷರಿಗೆ ಪುಷ್ಪ ಮಾಲೆಯನ್ನು ಹಾಕುವುದರ ಮುಖೇನ ಅಭಿನಂಧನೆ ಸಲ್ಲಿಸಿ ಶುಭಾಷಯ ಕೋರಿದರು.
ಕ್ರಾಂಗ್ರೇಸ್ ಪಕ್ಷದ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ ಕಿರಿಯ ಪುತ್ರ ಡಿ.ಎಸ್ ಸುರೇಂದ್ರ ಗೌಡ ತಮ್ಮ ಕಾಂಗ್ರೇಸ್ ಪಕ್ಷದ ಸದಸ್ಯರಲ್ಲದಿದ್ದರು ಸಹ ಬಿ.ಜೆ.ಪಿ ಬೆಂಬಲಿತÀ ನೂತನ ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ ರುದ್ರೇಶಪ್ಪರವರಿಗೆ ಪುಷ್ಪ ಮಾಲೆಯನ್ನು ಹಾಕಿ ಅಭಿನಂದನೆ ಸಲ್ಲಿಸಿ ಶುಭಾಷಯ ಕೋರಿದ್ದು ವಿಶೇಷತೆಯಿಂದ ಕೂಡಿತ್ತು.
ಉಪಸ್ಥಿತಿಯಲ್ಲಿ:- ಉಪಾಧ್ಯಕ್ಷರಾದ ಗಿರೀಶ್ ಪಟೇಲ್, ಸದಸ್ಯರಾದ ನಾಗರಾಜ್ ನಾಯ್ಕ್, ರಾಜಪ್ಪ, ಗಾಯಿತ್ರಿ, ನೀಲಾ ಬಾಯಿ, ಲಲೀತಮ್ಮ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಬಿಜೆಪಿ ಮತ್ತು ಕಾಂಗ್ರೇಸ್ ಮುಖಂಡರು ಸಹ ಬಾಗಿಯಾಗಿದ್ದರು.