ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದಲ್ಲಿ ಭದ್ರಾವತಿ ಮತ್ತು ನ್ಯಾಮತಿ ತಾಲ್ಲೂಕು ಕಸಾಪ ಸಹ ಯೋಗದಲ್ಲಿಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಉದ್ಘಾಟಿಸಿದರು. ದತ್ತಿದಾನಿ ಕೋಟೆಕರೇಗೌಡ್ರ ನಾಗರಾಜಪ್ಪಇದ್ದಾರೆ.

ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದಲ್ಲಿ ಗುರುವಾರ ಭದ್ರಾವತಿ ಮತ್ತು ನ್ಯಾಮತಿ ತಾಲ್ಲೂಕು ಕಸಾಪ ಸಹಯೋಗದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಮತ್ತು ಕನ್ನಡಜ್ಯೋತಿಯ ಮೆರವಣಿಗೆ ನಡೆಯಿತು.

ಆರುಂಡಿ(ನ್ಯಾಮತಿ):
ಇಂದಿನ ಯುವ ಪೀಳಿಗೆ ಮತ್ತುಎಂಜಿನಿಯರ್, ವೈದ್ಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.
ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಭದ್ರಾವತಿ ಮತ್ತು ನ್ಯಾಮತಿತಾಲ್ಲೂಕು ಕಸಾಪ ಸಹಯೋಗದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥಕೋಟೆಕೇರಿಕರೇಗೌಡ್ರ ನಾಗರಾಜಪ್ಪಅವರು ಆಯೋಜಿಸಿದ್ದಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ವಿಶ್ವೇಶ್ವರಯ್ಯ ಅವg Àದೂರದೃಷ್ಟಿಯಿಂದ ನಿರ್ಮಾಣವಾದ ಕನ್ನಂಬಾಡಿಕಟ್ಟೆ, ಶರಾವತಿ ಹಿನ್ನಿರಿನ ವಿದ್ಯುತ್ ಉತ್ಪಾದನೆ ಪ್ರಪಂಚಕ್ಕೆ ದಾರಿ ದೀಪವಾಗಿವೆ. ಇಂದಿನ ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ದೂರದೃಷ್ಟಿಕೊರತೆಇದೆಎಂದರು.

ಭದ್ರಾವತಿ ತಾಲ್ಲೂಕು ಕಸಾಪ ಅಧ್ಯಕ್ಷಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿಗಳಾದ ಕತ್ತಿಗೆಚನ್ನಪ್ಪ, ಭದ್ರಾವತಿ ಜಿ.ವಿ.ಸಂಗಮೇಶ್ವರ, ನ್ಯಾಮತಿ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಮುಖ್ಯಶಿಕ್ಷಕ ಪರಮೇಶ್ವರಪ್ಪ ಮಾತನಾಡಿದರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿªರ್ಷ ಪ್ರೋತ್ಸಾಹಧನ ನೀಡುವುದಾಗಿದತ್ತಿದಾನಿ ನಾಗರಾಜಗೌಡ್ರು ಪ್ರಕಟಿಸಿದರು.
ಸಾಹಿತಿಗಳಾದ ಡಿ. ದೇವೇಂದ್ರಯ್ಯ, ಯು.ಎನ್.ಸಂಗನಾಳಮಠ, ವೀರಕೇಶರಪ್ಪ ಉಪಸ್ಥಿತರಿದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಗ್ರಾಮದಎರಡು ಡೊಳ್ಳು ಕುಣಿತತಂಡದವರೊಂದಿಗೆಗ್ರಾಮದಲ್ಲಿ ವಿಶ್ವೇಶ್ವರಯ್ಯ, ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು.
ಮಂಜುನಾಥ ಪಾಟೀಲ್ ಸ್ವಾಗತಿಸಿದರು, ಕಲಾವಿದ ಮಂಜಪ್ಪ ನಿರೂಪಿಸಿದರು, ಶಿಕ್ಷಕಿ ಸಿ.ಎಸ್.ರೇಣುಕಾ ವಂದಿಸಿದರು.

Leave a Reply

Your email address will not be published. Required fields are marked *