ದಾವಣಗೆರೆ: ಅನ್ನದಾನ, ವಿದ್ಯಾದಾನ ಅಂತೆಯೇ ರಕ್ತದಾನವೂ ಸಹ ಶ್ರೇಷ್ಠವಾಗಿದ್ದು, ಇದನ್ನು ಆರೋಗ್ಯವಂತ 18 ವರ್ಷ ತುಂಬಿದ 50 ವರ್ಷದೊಳಗಿನ ಆರೋಗ್ಯವಂತರಿಗೆ ರಕ್ತದಾನ ಮಾಡಲು ಪ್ರೇರೆಪಿಸಬೇಕೆಂದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಕರೆ ನೀಡಿದ್ದಾರೆ.
ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಅಭಿಯಾನದಡಿ ಇಂದು ನಗರದ ಸ್ಟೇಡಿಯಂ ಗ್ರೂಪ್ ಮತ್ತು ಕೆ.ಟಿ.ಜೆ.ನಗರ ವತಿಯಿಂದ ನಡೆದ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಇಂದಿನ ಶಿಬಿರದಲ್ಲಿ ಬಹಳಷ್ಟು ಜನರು ಮೊದಲ ಬಾರಿಗೆ ರಕ್ತದಾನ ಮಾಡಲು ಮುಂದೆ ಬಂದಿದ್ದು, ಅವರಿಗೆ ಮಲ್ಲಿಕಾರ್ಜುನ್ ಅವರ ಮೇಲಿನ ಅಭಿಮಾನವೇ ಪ್ರೇರಣೆ ಆಗಿರುವುದು ಕಂಡು ಬಂದಿತು. ಇದು ಮುಂದೆಯೂ ಸಹ ಇದ್ದು, ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕೆಂದರು.
ಎಸ್.ಎಸ್.ಎಂ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾದ್ಯ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 5555 ಎಸ್.ಎಸ್.ಎಂ ಅಭಿಮಾನಿ ರಕ್ತದಾನಿಗಳಿಂದ ಸಂಗ್ರಹಿಸುವ ರಕ್ತವನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
ಈ ಬೃಹತ್ ರಕ್ತದಾನ ಅಭಿಯಾನಕ್ಕೆ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ, ಬಾಪೂಜಿ ರಕ್ತ ನಿಧಿ ಕೇಂದ್ರ ಹಾಗೂ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಸ್.ಎಸ್. ಆಸ್ಪತ್ರೆ ಮತ್ತು ಎಸ್.ಎಸ್. ರಕ್ತ ನಿಧಿ ಕೇಂದ್ರದವರು ಕೈಜೋಡಿಸಿದರು.
ಶಿಬಿರವನ್ನುದ್ದೇಶಿಸಿ ಶಿವಗಂಗಾ ಬಸವರಾಜ್, ಕಬಡ್ಡಿ ನಾಗರಾಜ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಶಿವಗಂಗಾ ಶ್ರೀನಿವಾಸ್, ಹೆಚ್.ಮಹಾದೇವ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ರಾಜು ರೆಡ್ಡಿ, ದುರುಗೇಶ್ ವಕೀಲರು, ರಂಗಸ್ವಾಮಿ, ಚಂದ್ರು, ಪ್ರಕಾಶ್, ಹಾಲಪ್ಪ, ಸುರೇಶ್ ನಾಯ್ಕ, ಶೌಕತ್, ತಾಜ್ ಪ್ಯಾಲೇಸ್ ದಾದಾಪೀರ್, ಆದಾಪುರ ನಾಗರಾಜ್, ಪಾಲಿಕೆ ಮಾಜಿ ಸದಸ್ಯ ರಾಜಶೇಖರ್, ನಾಗರಾಜ್, ಹರೀಶ್ ಕೆ.ಎಲ್.ಬಸಾಪುರ,ಶ್ರೀಕಾಂತ್ ಬಗೇರ, ಸತೀಶ್ ಶೆಟ್ಟಿ, ಬಾಪೂಜಿ ರಕ್ತ ನಿಧಿ ಕೇಂದ್ರದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು