ದಾವಣಗೆರೆ: ಆರೋಗ್ಯವಂತ 18 ವರ್ಷ ತುಂಬಿದ 50 ವರ್ಷದೊಳಗಿನ ಮಹಿಳೆಯರು ಸಹ ರಕ್ತದಾನ ಮಾಡಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಅಭಿಯಾನದಡಿ ಇಂದು ಕಕ್ಕರಗೊಳ್ಳ ಗ್ರಾಮದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಕೇವಲ ಪುರುಷರಷ್ಟೇ ರಕ್ತದಾನ ಮಾಡಬಹುದು. ಮಹಿಳೆಯರು ಮಾಡುವಂತಿಲ್ಲ ಎಂಬ ಭ್ರಮೆ ಇದೆ. ಆರೋಗ್ಯವಂತಹ ಮಹಿಳೆಯರು ಸಹ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವುದರ ಜೊತೆಗೆ ತಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು ಎಂದರು.
ಎಸ್.ಎಸ್.ಎಂ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾದ್ಯ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 5555 ಎಸ್.ಎಸ್.ಎಂ ಅಭಿಮಾನಿ ರಕ್ತದಾನಿಗಳಿಂದ ಸಂಗ್ರಹಿಸುವ ರಕ್ತವನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಈಗಾಗಲೇ ಅವಶ್ಯ ಇರುವವರಿಗೆ ರಕ್ತದ ಯೂನಿಟ್‍ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಈ ಬೃಹತ್ ರಕ್ತದಾನ ಅಭಿಯಾನದಲ್ಲಿ ಮಹಿಳೆಯರು ಸೇರಿದಂತೆ ಆವರಗೊಳ್ಳ, ಕಕ್ಕರಗೊಳ್ಳ ಮತ್ತು ಕೋಡಿಹಳ್ಳಿ ಗ್ರಾಮದ 107 ಎಸ್ಸೆಸ್ಸೆಂ ಅಭಿಮಾನಿಗಳು ರಕ್ತದಾನ ಮಾಡಿದ್ದು, ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ, ಬಾಪೂಜಿ ರಕ್ತ ನಿಧಿ ಕೇಂದ್ರ ಹಾಗೂ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಸ್.ಎಸ್. ಆಸ್ಪತ್ರೆ ಮತ್ತು ಎಸ್.ಎಸ್. ರಕ್ತ ನಿಧಿ ಕೇಂದ್ರದವರು ಕೈಜೋಡಿಸಿದರು.
ಶಿಬಿರವನ್ನುದ್ದೇಶಿಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆ.ಜಿ.ಬಸವನಗೌಡ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ.ಶಾಂತರಾಜ್, ಮಾಜಿ ಪ್ರಧಾನರಾದ ಕೋಡಿಹಳ್ಳಿ ಜಯಣ್ಣ, ಆವರಗೊಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ವಿರೇಶ್, ಕಕ್ಕರಗೊಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಸಿರಿಗೆರೆ ಗುತ್ತ್ಯಪ್ಪ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಕೆ.ಜಿ.ಮಹಾಂತೇಶ್ ಗೌಡ್ರು, ಕೋಡಿಹಳ್ಳಿ ನವೀನ್, ಸಾಧಿಕ್, ಆವರಗೊಳ್ಳದ ಸಿದ್ದೇಶ್, ಮುಸ್ತಾಫ್, ಹಾಲಪ್ಪ, ದರ್ಶನ್, ಕಿರಣ್, ಕಿಸಾನ್ ಕಾಂಗ್ರೆಸ್‍ನ ಯೋಗೇಶ್, ಗೋಣಿವಾಡ ವೀರಣ್ಣ, ಯಕ್ಕನಹಳ್ಳಿ ನಾಗರಾಜ್, ಮಹಾಂತೇಶ್, ಮಲ್ಲಿಕಾರ್ಜುನ್ ಮತ್ತು ಬಾಪೂಜಿ ರಕ್ತ ನಿಧಿ ಕೇಂದ್ರದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.