ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರು ಇಂದು ತಮ್ಮ 55 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಇಂತಹ ದೂರ ದೃಷ್ಟಿ ಚಿಂತನೆಯುಳ್ಳ ನಾಯಕ ಅಧಿಕಾರದ ಅಜ್ಞಾತವಾಸದಲ್ಲಿರುವುದು ಮಾತ್ರ ವಿಪರ್ಯಾಸ ಎಂದರೆ ತಪ್ಪಾಗಲಾರದು.

ಎಲ್ಲರ ನೆಚ್ಚಿನ ಮಲ್ಲಣ್ಣ ರಾಜಕೀಯ ಜೀವನದಲ್ಲಿ ಅಧಿಕಾರದಲ್ಲಿ ಇದ್ದದ್ದು ಕೇವಲ 11 ವರ್ಷ ಮಾತ್ರ, ಆದರೆ ಅವರು ಮಾಡಿದ ಕೆಲಸ ಕಾರ್ಯಗಳು, ರೂಪಿಸಿದ ಯೋಜನೆಗಳು ಮಾತ್ರ ಶತಮಾನಗಳೇ ಕಳೆದರೂ ಮರೆಯಲಾಗದಂತ ಕಾರ್ಯಗಳನ್ನೇ .

ಕುಂದುವಾಡ ಕೆರೆ,
15 ಸಾವಿರಕ್ಕೂ ಹೆಚ್ಚು ಆಶ್ರಯ ಮನೆ ಹಂಚಿಕೆ
ಗಾಜಿನ ಮನೆ ನಿರ್ಮಾಣ
ವಿದ್ಯುತ್ ಅಲಂಕೃತ ದೀಪಗಳು, ವ್ಯವಸ್ಥಿತ ರಸ್ತೆ ನಿರ್ಮಾಣ
ಎಪಿಎಂಸಿ ಆವರಣದಲ್ಲಿ ಜಾನುವಾರು ಮಾರುಕಟ್ಟೆ ಸ್ಥಾಪನೆ
ಗುರುಗಳ ಬಯಕೆಯ 22 ಕೆರೆಗಳ ಯೋಜನೆ ಯಶಸ್ವಿಯಾಗಲು ಸಹಕಾರ.
ಬಿಎಸ್ಎನ್ಎಲ್ ಮುಂಭಾಗದ ಫ್ಲೈಓವರ್ ನಿರ್ಮಾಣ.
ಸ್ಮಾರ್ಟ್ ಸಿಟಿ ಯೋಜನೆ ರೂವಾರಿ.
ಹಳ್ಳಿಗಳಲ್ಲಿ ಹೊಲಗಳ ಗೆ ಹೋಗುವ ರಸ್ತೆಗಳನ್ನು ಸಹ ಸಿಸಿ ರಸ್ತೆ ಮಾಡಿದ ಹಿರಿಮೆ.
ಎಲ್ಲಾ ಧರ್ಮದ, ಎಲ್ಲಾ ಸಮುದಾಯದ ಸಂಘ-ಸಂಸ್ಥೆಗಳಿಗೆ ಸರಕಾರದಿಂದ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ.
ವೈಯಕ್ತಿಕವಾಗಿ ಕೋವಿಡ್ ಲಸಿಕೆ ವಿತರಣೆ

ಈ ರೀತಿಯ ಯೋಜನೆಗಳನ್ನು ಜಿಲ್ಲೆಯ ಜನರಿಗೆ ನೀಡಿದ ಹಾಗೂ ಜಿಲ್ಲೆಯನ್ನು ರಾಜ್ಯದ ಭೂಪಟದಲ್ಲಿ ಅಭಿವೃದ್ಧಿಯ ಉನ್ನತ ಶಿಕಾರಿಕೇರಿಸಿದ ಹಿರಿಮೆ ಮಲ್ಲಣ್ಣ ಅವರಿಗಲ್ಲದ ಮತ್ತಾರಿಗೆ ಸಲ್ಲಲು ಸಾಧ್ಯ ಅಲ್ಲವೇ.

ಎಲ್ಲಾ ವಿಷಯಗಳಲ್ಲಿಯೂ ತಮ್ಮದೇ ಆದ ಪಾಂಡಿತ್ಯವನ್ನು ಹೊಂದಿರುವ ಇವರ ಬಳಿ ಚರ್ಚಿಸಲು ಬರುವ ಇಂಜಿನಿಯರ್ ಗಳ ಬಳಿ ಇಂಜಿನಿಯರಾಗಿ, ವೈದ್ಯರ ಬಳಿ ವೈದ್ಯರಾಗಿ, ವಕೀಲರ ಬಳಿ ವಕೀಲನಾಗಿ, ಅಧಿಕಾರಿಗಳ ಬಳಿ ಅಧಿಕಾರಿಯಾಗಿ, ಉದ್ಯಮಿಗಳ ಬಳಿ ಉದ್ಯಮಿಯಾಗಿ, ಜನಸಾಮಾನ್ಯರ ಬಳಿ ಜನಸಾಮಾನ್ಯನಾಗಿ ತಮ್ಮದೇ ಆದ ಸಲಹೆ ನೀಡುವುದನ್ನು ನೋಡಿದರೆ ಅವರ ಬಳಿ ಚರ್ಚಿಸಿದವರಿಗೆ ಅವರ ಜ್ಞಾನದ ಅರಿವಾಗುತ್ತದೆ.

ಅವರು ಇಂದು ತಮ್ಮ 55 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರಬಹುದು 24 ವರ್ಷಗಳ ಚುನಾವಣಾ ರಾಜಕೀಯದಲ್ಲಿ ಇರಬಹುದು ಆದರೆ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು, ಕಾರ್ಯಕರ್ತರ ಪಡೆಯನ್ನು ಅಭಿಮಾನಿ ಬಳಗವನ್ನು ಹೊಂದಿರುವ ಇವರು ಅಧಿಕಾರದಲ್ಲಿದ್ದದ್ದು ಮಾತ್ರ ಕೇವಲ 11 ವರ್ಷ.

1998 ರ ಲೋಕಸಭಾ ಚುನಾವಣೆಯಲ್ಲಿ ಇವರ ತಂದೆಯವರದ ಡಾ. ಶಾಮನೂರು ಶಿವಶಂಕರಪ್ಪನವರು ಲೋಕಸಭೆಗೆ ಆಯ್ಕೆಯಾದ ನಂತರ ಅವರು ತೆರವುಗೊಳಿಸಿದ್ದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು ಮೊದಲ ಚುನಾವಣೆಯಲ್ಲಿ 21 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯಾಗುವ ಮೂಲಕ ತಮ್ಮ ರಾಜಕೀಯ ಪ್ರವೇಶಿಸಿದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಗೆಲ್ಲುವ ಮೂಲಕ ಎಸ್ ಎಂ ಕೃಷ್ಣ ಸಂಪುಟದಲ್ಲಿ ಯುವ ಜನ ಸೇವಾ ಕ್ರೀಡಾ ಸಚಿವರಾಗಿ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಅಭಿವೃದ್ಧಿಯ ನಾಗಲೋಟವನ್ನೇ ಸೃಷ್ಟಿಸಿದರು.

ಮುಂದೆ ನಡೆದ ರಾಜಕೀಯ ಬದಲಾವಣೆಯಲ್ಲಿ ರಾಷ್ಟ್ರ ರಾಜಕಾರಣದ ಕಡೆ ಮುಖ ಮಾಡಿ 2004 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು, ಆದರೆ ಪ್ರತಿಸ್ಪರ್ಧಿಗೆ ಇದ್ದ ಒಮ್ಮೆ ಅನುಕಂಪದ ಅಲೆ, ಮತ್ತೊಮ್ಮೆ ಶ್ರೀಗಳ ಆಶೀರ್ವಾದ, ಮಗದೊಮ್ಮೆ ಮೋದಿಯ ಅಲೆಯ ನಡುವೆ ಅಭಿವೃದ್ಧಿಯ ಹರಿಕಾರನಿಗೆ 3 ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲುವು ಮರಿಚಿಕೆಯಾಯಿತು.

2013ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ದಾಖಲೆಯ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ಸಿದ್ದರಾಮಯ್ಯನವರ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಅವರು ಮಾಡಿದ ಕಾರ್ಯಗಳು ಅವಿಸ್ಮರಣೀಯ.

ಚುನಾವಣೆ ಎಂಬುದು ಎಂತಹ ಮಾಯೆ ಇಲ್ಲಿ ಸೋಲು ಗೆಲುವು ಎಂಬುದು ಯಾವುದರ ಮೇಲೆ ನಿರ್ಣಯವಾಗುತ್ತದೆ ಎಂಬುದನ್ನು ಹರಿಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಇವರ ರಾಜಕೀಯ ಭವಿಷ್ಯವೇ ನಿದರ್ಶನ, ಸಾವಿರಾರು ಕೋಟಿ ಅನುದಾನ ಸದಾ ಅಭಿವೃದ್ಧಿ ಚಿಂತನೆ, ದೂರ ದೃಷ್ಟಿ ಯೋಜನೆಗಳ ಪರಿಕಲ್ಪನೆ ಆದರೂ ರಾಜಕೀಯ ಅಜ್ಞಾತವಾಸ, ಇವರ ರಾಜಕೀಯ ಅಜ್ಞಾತವಾಸದಿಂದ ಅವರಿಗಾದ ನಷ್ಟಕ್ಕಿಂತ ಅಭಿವೃದ್ಧಿಗಾದ ನಷ್ಟವೇ ಹೆಚ್ಚು ಎಂಬುದೇ ಹಲವರ ವಾದ.

ಏನೇ ಆಗಲಿ ಇವರ 55ನೇ ವರ್ಷದ ಹುಟ್ಟು ಹಬ್ಬದ ನಂತರವಾದರೂ ಜಿಲ್ಲೆಯ ಅಭಿವೃದ್ಧಿಯ ಅಜ್ಞಾತವಾಸ ಕೊನೆಗೊಂಡು ಮತ್ತೆ ನೂತನ ಅಭಿವೃದ್ಧಿ ಕಾರ್ಯಗಳು ಹಾಗೂ ಹೊಸ ಹೊಸ ಯೋಜನೆಗಳಿಗೆ ಜಿಲ್ಲೆ ಸಾಕ್ಷಿ ಆಗಲಿ ಎಂಬುದೇ ನಮ್ಮೆಲ್ಲರ ಬಯಕೆ.

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *