ರಾಷ್ಟ್ರೀಯ ಪೆÇೀಷಣೆ ಅಭಿಯಾನ (ಪೋಷಣ್ 2.0) ಯೋಜನೆಯಡಿ ದಾವಣಗೆರೆ ಹಾಗೂ ಹರಿಹರ ಶಿಶು ಅಭಿವೃದ್ಧಿ ಯೋಜನೆಯ ತಾಲ್ಲೂಕು ಮಟ್ಟದ ಬ್ಲಾಕ್ ಕೋ-ಆರ್ಡಿನೇಟರ್ ಹುದ್ದೆಗೆ ಕಾಲಾವಧಿಯು 11 ತಿಂಗಳುಗಳಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇಲೆ ಜಿಲ್ಲಾ ಸಮಿತಿಯ ಅನುಮೋದನೆ ಮೇರೆಗೆ ಮುಂದುವರೆಸಲಾಗುವುದು ಎಂಬ ಷರತ್ತಿಗೊಳಪಟ್ಟು ನೇರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.29 ಕೊನೆಯ ಆಗಿದ್ದು, ಅರ್ಜಿಯನ್ನು “ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂ.ಸಿ.ಸಿ, ‘ಬಿ’ ಬ್ಲಾಕ್, ಕುವೆಂಪು ನಗರ, ದಾವಣಗೆರೆ, ದೂರವಾಣಿ ಸಂಖ್ಯೆ: 08192-264056. ಇಲ್ಲಿ ಅರ್ಜಿಯನ್ನು ಪಡೆದು ಎಲ್ಲಾ ದಾಖಲೆಗಳೊಂದಿಗೆ ಸೆ.29 ರಂದು ಸಂಜೆ 5.00 ಗಂಟೆಯೊಳಗಾಗಿ ಸಲ್ಲಿಸುವುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಪ್ರಕಟೆಯಲ್ಲಿ ತಿಳಿಸಿದ್ದಾರೆ.