ಹುಣಸಘಟ್ಟ: ಸದಾ ಜೀವನದ ಮೌಲ್ಯಗಳನ್ನು ಪ್ರಶಂಸಿಸಿ ಸಮಾಜ ಕಟ್ಟುವಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಸೇವೆ ಅನನ್ಯ. ಇವರ ಜೀವನವೇ ಒಂದು ಇತಿಹಾಸ. ಶ್ರೀಗಳು ಕೆಸರಿನ ಕಮಲ ವಲ್ಲ ಅಗ್ನಿ ಕಮಲ ಅವರು ಮಾತನಾಡಿದರೆ ವಿಧಾನಸೌಧವೇ ನಡುಗುತ್ತಿತ್ತು ಎಂದು ಸಾಹಿತಿ ತೆಲಗಿ ವೀರಭದ್ರಪ್ಪನವರು ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ವಿನಾಯಕ ಪ್ರೌಢಶಾಲೆಯಲ್ಲಿ ತರಳಬಾಳು ವಿದ್ಯಾಸಂಸ್ಥೆ ಆಯೋಜಿಸಿದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 30 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೂ ತಮ್ಮ ಕೃತಿ ಪುಸ್ತಕಗಳನ್ನು ವಿತರಿಸಿ ವಚನ ಜೀವನ ದರ್ಶನ ವಿಷಯವಾಗಿ ಮಾತನಾಡಿ ಮಠ ಎಂಬ ಅರ್ಥಕ್ಕೆ ನಾವು ಇತ್ತೀಚಿಗೆ ತಿಳಿದುಕೊಂಡಿರುವುದೇನಂದರೆ ಸನ್ಯಾಸಿ ಗುರು ಇರುವ ಸ್ಥಳ ಆದರೆ 12ನೇ ಶತಮಾನದಲ್ಲಿ ಮಠಕ್ಕೆ ಇರುವ ಅರ್ಥ ಧರ್ಮನಿಷ್ಠೆ ಗೃಹಸ್ಥರು ವಾಸಿಸುವ ಸ್ಥಳ. ಇದಕ್ಕೆ ಆಧಾರವಾಗಿ ಹೇಳುವುದಾದರೆ ಭಕ್ತರ ಮನೆಗಳೆಲ್ಲಾ ಮಠಗಳಯ್ಯ ಎಂಬ ಆಡುವ ಮಾತು ಸಾಕ್ಷಿಯಾಗಿದೆ. ಕರ್ನಾಟಕ ಮಾತ್ರವಲ್ಲದೆ ಪ್ರಪಂಚವೇ ಬೆರಗಾಗುವ ಅದ್ಭುತ ಶಕ್ತಿ ಜಗಜ್ಯೋತಿ ಬಸವಣ್ಣನವರ ತತ್ವ ದರ್ಶನಗಳು ತತ್ವ ಅಮೃತವನ್ನು ಸವಿದು ಬಸವ ತತ್ವಗಳನ್ನು ಮೈಗೂಡಿಸಿಕೊಂಡು ಅಮರರಾದವರಲ್ಲಿ ಯುಗದ ಗುರು ಸಿರಿಗೆರೆಯ 20ನೇ ಜಗದ್ಗುರು ಶಿವಕುಮಾರ ಮಹಾಸ್ವಾಮಿಗಳು ಎಲ್ಲಾ ಮಠಮಾನ್ಯಗಳಿಗೆ ಮಾದರಿ ಶ್ರೀಗಳು ಎಂದರು.
ತಾಲೂಕು ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಪಿ ದೇವೇಂದ್ರಯ್ಯ ಮಾತನಾಡಿ ಕನ್ನಡದಲ್ಲಿ ಇವತ್ತು ಏನಿಲ್ಲಾ? ಎಲ್ಲಾ ಇದೆ. ಆದರೆ ಓದುವವರಿಲ್ಲದೆ ಕನ್ನಡ ಸೊರಗಿದೆ ಎಂದ ಅವರು ಇಂದು ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಎಂದರು.
ಶಾಲಾಭಿವೃದ್ಧಿ ಸಮಿತಿ ರುದ್ರೇಶಪ್ಪ ಮಾತನಾಡಿ ಹಿರಿಯ ಜಗದ್ಗುರುಗಳ ಪುಣ್ಯದ ಸಾಧನೆಗಳ ಹರಿವು ಎಲ್ಲರಿಗೂ ತಿಳಿಸುವ ಹಿನ್ನೆಲೆಯಲ್ಲಿ ಶ್ರೀಗಳ ಪುಣ್ಯ ಸ್ಮರಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಎ ಜಿ ಹನುಮಂತಪ್ಪ ನವರು ಸಾಹಿತಿ ತೆಲುಗಿ ವೀರಭದ್ರಪ್ಪನವರ ಪುಸ್ತಕ ಪ್ರಕಾಶನಕ್ಕೆ 10 ಸಾವಿರ ದೇಣಿಗೆ ನೀಡಿದರು.
ಶ್ರೀಗಳ 30ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ರಮೇಶಪ್ಪ, ತಾಲೂಕು ರೈತ ಮುಖಂಡ ಧನರಾಜಪ್ಪ,ಕುಂದೂರು ಬಸವರಾಜಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರುದ್ರೇಶಪ್ಪ ವೀರಣ್ಣ ಶೇಖರಪ್ಪ ಮುಖ್ಯಶಿಕ್ಷಕರು ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *