ಹೊನ್ನಾಳಿ ಸಪ್ಟಂಬರ್ 22 ತಾಲೂಕು ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.
ಈ ಹಿಂದೆ ಇದ್ದ ಶ್ರೀಮತಿ ಚಂದ್ರಕಲಾ ಶಿವಕುಮಾರ್ ಕೆಎಸ್ ಇವರ ಅಧ್ಯಕ್ಷರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇವರ ತೆರವಾದ ಸ್ಥಾನಕ್ಕೆ ಇಂದು ಶ್ರೀ ಗಂಗಾಧರ ಎಚ್ ಪಿ ರವರು ಅಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ಚುನಾವಣಾ ಅಧಿಕಾರಿಗೆ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ಕೂಡ ಅರ್ಜಿಯನ್ನು ಸಲ್ಲಿಸಿದೆ ಇರುವ ಕಾರಣ ಆ ಗ್ರಾಮ ಪಂಚಾಯಿತಿಯಲ್ಲಿ ಹತ್ತು ಸದಸ್ಯರನ್ನು ಒಳಗೊಂಡಿತ್ತು. ಆದರೆ ಬಿಜೆಪಿಯ 7 ಸದಸ್ಯರನ್ನು ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಗಳು ಹಾಗೂ ಹೊನ್ನಾಳಿ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಟೇಶ್ ರವರು ಘೋಷಣೆ ಮಾಡಿದರು.
ನೂತನ ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಗಂಗಾಧರಪ್ಪ ಎಚ್ ಪಿ ರವರು ನಂತರ ಮಾತನಾಡಿ ನನಗೆ ಅಧ್ಯಕ್ಷರಾಗಿ ಆಯ್ಕೆಯಾಗಲಿಕ್ಕೆ ಸಹಕರಿಸಿದ ಸರ್ವ ಸದಸ್ಯರುಗಳಿಗೆ ಧನ್ಯವಾದಗಳು ತಿಳಿಸಿ. ನಾನು ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ ಎಂದರೆ ಅದು ದೇವರ ಮತ್ತು ಜನಗಳ ಆಶೀರ್ವಾದದಿಂದ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಶ್ರೀ ಗಂಗಾಧರಪ್ಪ ಹೆಚ್ ಪಿ ಉಪಾಧ್ಯಕ್ಷರಾದ ಮಧು ಅನಂತನಾಯಕ, ಮಾಜಿ ಅಧ್ಯಕ್ಷರಾದ ಶ್ರೀಮತಿ ಚಂದ್ರಕಾಲ ಶಿವಕುಮಾರ್ ,ಸದಸ್ಯರುಗಳಾದ ರುದ್ರೇಶ್, ರಮೇಶ್ ನಾಯ್ಕ, ಲಕ್ಷ್ಮಿಬಾಯಿ ,ಸುರೇಶ ನಾಯ್ಕ, ರತ್ನಮ್ಮ ದಾಸಪ್ಪ ಚುನಾವಣಾ ಅಧಿಕಾರಿಯಾಗಿ ವಿಶ್ವ ಡಾಕ್ಟರ್ ನಟೇಶ್ ಪಿಡಿಒ ರಾಘವೇಂದ್ರ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯತಿ ಸುತ್ತಮುತ್ತಲಿನ ಬಿಜೆಪಿ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *