ಹುಣಸಘಟ್ಟ: ಇಂದು ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣ ಎಲ್ಲಿ ಅಭಿವೃದ್ಧಿಯಾಗುತ್ತದೆ ಯು ಅಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ನಾವು ಕಾಣಬಹುದಾಗಿದೆ ಎಂದು ಹೊಟ್ಯಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಟ್ಯಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ಮಾತ್ರ ಮುನ್ನಡೆ ಗಳಿಸಲು ಸಾಧ್ಯ. ಶಿಕ್ಷಕರ ಪ್ರಾಮಾಣಿಕ ಪ್ರಯತ್ನಕ್ಕೆ ಪೂರಕವಾಗಿ ಪೋಷಕರು ಕೈಜೋಡಿಸಿ ಶ್ರಮಿಸಿದ್ದೇನೆ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಈ ರಾಷ್ಟ್ರದ ಸತ್ಪ್ರಜೆಗಳಾಗಿ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದರು.
ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೋಷಕರು ತಾಯಂದಿರು ತಮ್ಮ ಮಕ್ಕಳ ಪಾಕ್ಷಿಕ ಕಲಿಕೆಗೆಸಂಬಂಧಿಸಿದಂತೆ ಚರ್ಚೆ ಸೇರಿಸಿದರು. ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ವಿಷಯವಾರು ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದರು. ಕಲಿಕಾ ಚೇತರಿಕೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ, ನಿಗದಿತ ಸಮಯದಲ್ಲಿ ಕಲಿಯಲೇಬೇಕಾದ ಸಾಮರ್ಥ್ಯಗಳ ಮಕ್ಕಳ ಕಲಿಕೆಯ ಕೃತಿ ಸಂಪುಟ, ಗೃಹಪಾಠ, ಇಂಗ್ಲಿಷ್ ಭಾಷಾ ಕಲಿಕೆಗೆ ಹೆಚ್ಚಿನ ಬರವಣಿಗೆ ನೀಡುವುದು, ಸರಳ ನಿತ್ಯ ಜೀವನದಲ್ಲಿ ಬಳಸುವ ಪದಗಳನ್ನು ಸಂಭಾಷಣೆ ಮೂಲಕ ಕಲಿಸುವುದರ ಬಗ್ಗೆ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅತಿ ತುಂಬಾ ಪ್ರಶಸ್ತಿ ಪಡೆದ ಶಾಲಾ ಶಿಕ್ಷಕ ಜಿ ಎಚ್ ಪ್ರಹಲ್ಲಾದ್ ರವರನ್ನು ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಪೋಷಕರು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಸವನಗೌಡ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಇಂದ್ರಮ್ಮ, ಸದಸ್ಯರುಗಳಾದ ಮಂಜುನಾಥ್, ಹಾಲೇಶ, ಆದರ್ಶ, ಕರಿಬಸಪ್ಪ, ಮಮತಾ, ರೂಪ, ಶಶಿಕಲಾ, ಸುಮಾ, ರತ್ನಮ್ಮ, ಗೀತಾ, ಮಂಗಳ, ವಸಂತಮ್ಮ, ರೇಖಾ ಉಪಸ್ಥಿತರಿದ್ದರು.