ದಾವಣಗೆರೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಉಚಿತ ಚಿಕಿತ್ಸೆ ನೀಡುವ ಕಾರ್ಯದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್
ಎಸ್.ಎಸ್. ಮಲ್ಲಿಕಾರ್ಜುನ ರವರ 55ನೇ ಹುಟ್ಟುಹಬ್ಬದ ಪ್ರಯುಕ್ತ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ಕೆಳಗಿನ ಸ್ಕ್ರೀನಿಂಗ್ ಟೆಸ್ಟ್ ಹಾಗೂ ಇನ್ನಿತರ ಉಚಿತ ಸೌಲಭ್ಯಗಳಿಗೆ ಡಾ. ಶಾಮನೂರು ಶಿವಶಂಕರಪ್ಪ ನವರು ಚಾಲನೆ ನೀಡಿದರು.
ಜೀವನದಲ್ಲಿ ವಿದ್ಯೆ, ಹಣಕ್ಕಿಂತ ಬಹು ಮುಖ್ಯವಾದದ್ದು ಆರೋಗ್ಯ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸೂಕ್ತ ಚಿಕಿತ್ಸೆ ಪ್ರಾರಂಭಿಕ ಹಂತದಲ್ಲಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದರಿಂದ ಗುಣವಾಗುವ ಸಂಭವ ಹೆಚ್ಚು, ಹಾಗಾಗಿ ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಎಸ್.ಎಸ್ ಕೇರ್ ಟ್ರಸ್ಟ್ ನಡೆಸುತ್ತಿದ್ದು ಇದರ ಸದುಪಯೋಗ ಎಲ್ಲರೂ ಪಡೆಯಬಹುದಾಗಿದೆ.
ಯುವಕರು ಹಾಗೂ ವಯಸ್ಕರರಲ್ಲಿ ಅತಿ ಹೆಚ್ಚು ಕಾಣುವ ಹೃದಯ ಸಮಸ್ಯೆ, ಆರೋಗ್ಯ ಪದ್ಧತಿ ಹಾಗೂ ಒತ್ತಡದ ಜೀವನದಿಂದ ಹೃದಯ ಸಮಸ್ಯೆ ಕಾಣುತ್ತಿದ್ದು, ಇದರ ಬಗ್ಗೆ ಸರಿಯಾಗಿ ಮಾಹಿತಿ ಇರದೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೆ ಸಾವು ನೋವುಗಳು ಹೆಚ್ಚಾಗುವುದನ್ನು ಕಂಡು ಪಲ್ಸ್ ಎಂಬ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿಯೇ ಇಸಿಜಿ ಮತ್ತು ಬಿಪಿ, ಸಕ್ಕರೆ ಕಾಯಿಲೆಯನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡುವ ಮೂಲಕ ಸ್ಥಳದಲ್ಲಿಯೇ ಅವರ ಆರೋಗ್ಯ ಮಾಹಿತಿ ನೀಡಲಾಗುತ್ತದೆ.
ಚಿಕ್ಕ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಸಮಸ್ಯೆ ಹೆಚ್ಚಾಗಿ ಕಾಣುತ್ತಿದ್ದು, ಕಬ್ಬಿಣಾಂಶ ಕೊರತೆ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಮಕ್ಕಳ ಬೆಳವಣಿಗೆಯು ಕುಂಠಿತವಾಗುತ್ತದೆ,
ಇದನ್ನು ತಿಳಿದು ಜಿಲ್ಲೆಯ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರೋಗ್ಯ ಪರೀಕ್ಷೆ ಮಾಡುವ ಮೂಲಕ ಸಮಸ್ಯೆ ಇರುವ ಮಕ್ಕಳಿಗೆ ಪ್ರತಿ ತಿಂಗಳು ಸೂಕ್ತ ಆಹಾರ ಚಿಕಿತ್ಸೆ ನೀಡುವ ಕಾರ್ಯವನ್ನು, ನಮ್ಮ ಎಸ್.ಎಸ್. ಕೇರ್ ಟ್ರಸ್ಟ್ ಮಾಡುತ್ತಿದ್ದು, ಈಗಾಗಲೇ ಕಕ್ಕರಗೊಳ್ಳ ಹಾಗೂ ಅರಸಾಪುರ ಗ್ರಾಮದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆಯು ಹೆಚ್ಚಾಗಿದ್ದು, ಇದರಲ್ಲಿ ಡಯಾಬಿಟಿಕ್ ರೆಟಿನೋಪತಿ (ಕಣ್ಣಿನ ಆರೋಗ್ಯದ) ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ, ಸಕ್ಕರೆ ಕಾಯಿಲೆ ಇರುವಂತಹ ವ್ಯಕ್ತಿಗಳಿಗೆ ರಕ್ತದಲ್ಲಿರುವ ಸಕ್ಕರೆ ಮಟ್ಟ ಹೆಚ್ಚಾದಾಗ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುವ ಕಾರಣ, ಇದರ ಬಗ್ಗೆ ಜಾಗೃತಿ ಮೂಡಿಸಿ ಅವರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಗುತ್ತದೆ.
ಮಹಿಳೆಯರಿಗೆ ತೊಂದರೆ ನೀಡುವ ಸಮಸ್ಯೆ ಎಂದರೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್, ಇದರ ಬಗ್ಗೆ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಮಾಹಿತಿ ಕೊರತೆ ಇರುವುದರಿಂದ ಕ್ಯಾನ್ಸರ್ ಅಂತಿಮ ಘಟ್ಟಕ್ಕೆ ಹೋದ ನಂತರ ಚಿಕಿತ್ಸೆಗೆ ಬರುವ ಕಾರಣದಿಂದ ಚಿಕಿತ್ಸೆ ನೀಡಿದರು ಕೂಡ ಫಲಕಾರಿಯಾಗುವುದಿಲ್ಲ, ಬದುಕುಳಿಯುವ ಸಾಧ್ಯತೆ ಕಡಿಮೆ, ಇದನ್ನು ಅರಿತು ಮಹಿಳೆಯರಿಗೆ ಸ್ಕ್ರೀನಿಂಗ್ ಮಾಡುವ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ಸಮಸ್ಯೆ ಪತ್ತೆ ಹಚ್ಚಿ, ಸೂಕ್ತ ಮಾಹಿತಿಯೊಂದಿಗೆ, ಉಚಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಹಿಳೆಯರಿಗೆ ಅನುಕೂಲ ಉಂಟು ಮಾಡಲು ಪ್ರಯತ್ನಿಸುತ್ತದೆ.
ಹುಟ್ಟಿದ ಶಿಶುಗಳಲ್ಲಿ ಒಂದು ತಿಂಗಳು ತುಂಬುವುದರೊಳಗೆ ಶ್ರವಣ ತಪಾಸಣೆಗೆ ಒಳಪಡಿಸಿ, ಒಂದರಿಂದ ಮೂರು ತಿಂಗಳ ಅವಧಿಯವರೆಗೆ ಸ್ಕ್ರೀನಿಂಗ್ ಪರೀಕ್ಷೆ ಮಾಡುವ ಮೂಲಕ ಶ್ರವಣ ದೋಷವಿದ್ದರೆ ಮುಂದೆ ಆಗಬಹುದಾದ ತೊಂದರೆಗೆ ಶೀಘ್ರವೇ ಪರಿಹಾರ ಹುಡುಕಲು ಪೋಷಕರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಟ್ರಸ್ಟ್ ಮಾಡುತ್ತದೆ.
*ಸಾವು ಎಂಬುದು ತಾನಾಗಿಯೇ ಬರಲಿ, ಸಾರ್ವಜನಿಕರಲ್ಲಿರುವ ವೈದ್ಯಕೀಯ ಮಾಹಿತಿಯ ಕೊರತೆಯಿಂದ ಹಾಗೂ ನಿರ್ಲಕ್ಷತೆಯಿಂದ ಮತ್ತು
ಚಿಕಿತ್ಸೆಯ ವೈಫಲ್ಯದಿಂದ ಬರದಿರಲಿ ಎಂಬುದೇ ಎಸ್.ಎಸ್. ಕೆ ಟ್ರಸ್ಟ್ ಆಶಯವಾಗಿದೆ.
ಮಹಿಳೆಯರಿಗೆ ತೊಂದರೆ ನೀಡುವ ಸಮಸ್ಯೆ ಎಂದರೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್
ಗ್ರಾಮೀಣ ಭಾಗದ ಮಹಿಳೆಯರಿಗೆ ಸರಿಯಾದ ಮಾಹಿತಿ ಇರದ ಕಾರಣ ಕ್ಯಾನ್ಸರ್ ಅಂತಿಮ ಘಟ್ಟಕ್ಕೆ ತಲುಪಿದಾಗ ಚಿಕಿತ್ಸೆಗೆ ಬರುವುದರಿಂದ ಪ್ರಯೋಜನವಾಗುವುದಿಲ್ಲ ಹಾಗೂ ಅವರ ಜೀವ ಉಳಿಯುವ ಸಾಧ್ಯತೆಗಳು ಕಡಿಮೆ ಹಾಗಾಗಿ ವೈದ್ಯರ ಸಲಹೆಯಂತೆ 40 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ.
ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ್.
ಲೈಫ್ ಟೈಮ್ ಟ್ರಸ್ಟಿ
ಎಸ್.ಎಸ್ ಕೇರ್ ಟ್ರಸ್ಟ್
ಡಯಾಬಿಟಿಕ್ ರೆಟಿನೋಪತಿ ಬಗ್ಗೆ ಹೆಚ್ಚಿನ ಗಮನಹರಿಸಿ ಸಕ್ಕರೆ ಕಾಯಿಲೆ ಇರುವಂತಹ ವ್ಯಕ್ತಿಗಳಿಗೆ ರಕ್ತದಲ್ಲಿರುವ ಸಕ್ಕರೆ ಮಟ್ಟ ಹೆಚ್ಚಾದಾಗ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅತ್ಯಾಧುನಿಕ ಯಂತ್ರಗಳಿಂದ ಉಚಿತ ತಪಾಸಣೆ ಮಾಡಲಾಗುವುದು ಹಾಗೂ ಅಪೌಷ್ಟಿಕಾಂಶತೆಯಿಂದ ಬಳಲುವ ಮಕ್ಕಳಿಗೆ ಆಹಾರ ಪದ್ಧತಿ ಬಗ್ಗೆ ಪೋಷಕರಿಗೆ ನುರಿತ ವೈದ್ಯರಿಂದ ಮಾಹಿತಿ ನೀಡುವ ಕಾರ್ಯವನ್ನು ಎಸ್.ಎಸ್ ಕೇರ್ ಟ್ರಸ್ಟ್ ಮಾಡುತ್ತದೆ.
ಎಸ್.ಎಸ್.ಮಲ್ಲಿಕಾರ್ಜುನ್.
ಮೆನೇಜಿಂಗ್ ಟ್ರಸ್ಟಿ
ಎಸ್.ಎಸ್ ಕೇರ್ ಟ್ರಸ್ಟ್.
“ಕಿಡ್ನಿ ವೈಫಲ್ಯದಿಂದ ಬಳಲುವ ರೋಗಿಗಳಿಗೆ ಡಯಾಲಿಸಿಸ್ ಅವಶ್ಯಕತೆ ಇದ್ದು, ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ನಮ್ಮ ಟ್ರಸ್ಟ್ ಮೂಲಕ ಉಚಿತ ಡಯಾಲಿಸಿಸ್ ಸೌಲಭ್ಯ ಹಾಗೂ ಹೃದಯ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಇಸಿಜಿ ಸ್ಕ್ರೀನಿಂಗ್ ಮಾಡುವ ಮೂಲಕ ರೋಗಿಗಳ ಆರೋಗ್ಯ ತಪಾಸಣೆ ಗೆ ಎಸ್ ಎಸ್ ಕೇರ್ ಟ್ರಸ್ಟ್ ಪಣತೊಟ್ಟಿದೆ.”
ಡಾ. ಶಾಮನೂರು ಶಿವಶಂಕರಪ್ಪನವರು.
ಚೇರ್ಮನ್
ಎಸ್.ಎಸ್ ಕೇರ್ ಟ್ರಸ್ಟ್.