ಹೊನ್ನಾಳಿ: ತಾಲ್ಲೂಕಿನ ಹೆಚ್ ಗೋಪಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷರಾಗಿ ಸುರೇಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿರುವರು.
ರಮೇಶರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಸುರೇಶ್ ನಾಯ್ಕ ಅವಿರೋದವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಯಾದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಡಿಎಂ ಷಣ್ಮುಖ ಘೋಷಿಸಿದರು.
ಪಂಚಾಯಿತಿ ಅಧ್ಯಕ್ಷರಾದ ಮಂಜುಳ, ಸದಸ್ಯರಾದ ಸಂದೀಪ್, ಪ್ರಮೀಳಾ, ಆಶಾ, ಎಂ ಬಸವರಾಜಪ್ಪ, ಹಾಲಮ್ಮ, ಮಂಜುಳಬಾಯಿ, ಗುಡ್ಡಾಚಾರಿ ಸೇರಿದಂತೆ ಗ್ರಾಮದ ಮುಖಂಡರಾದ ಗದ್ದುಗೇಶ್, ರುದ್ರಯ್ಯ, ಎ ಪರಮೇಶ್ವರಪ್ಪ, ಎಂಬಿ ರುದ್ರಪ್ಪ, ಸಿದ್ದಪ್ಪ, ವತ್ರ್ಯಪ್ಪ, ಗುತ್ಯಪ್ಪ, ಎಂಆರ್ ಚಂದ್ರಶೇಖರ್, ಸೌಮ್ಯನಾಯ್ಕ ಇದ್ದರು.