ನ್ಯಾಮತಿ ಃ ನ್ಯಾಮತಿ ತಾಲೂಕಿನ ಕೋಡಿಕೊಪ್ಪ ಗ್ರಾಮದ ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ ಶನಿವಾರ ನಡೆಯಿತು.
ಶ್ರೀ ಗಣಪತಿ , ಪುಣ್ಯಾಹ , ಗುರುಕಲಶ ಪೂಜಾ , ಅಭಿಷೇಕ ಸೇರಿದಂತೆ ವಿವಿಧ ದಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶನಿವಾರ ಕೋಡಿಕೊಪ್ಪ ಗ್ರಾಮದ ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ ಮುರುಡಬಸವೇಶ್ವರ ದೇಗುಲದ ಮುಂಭಾಗದಲ್ಲಿ ನಡೆಯಿತು.
ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ ಮೊದಲು ಗ್ರಾಮದ ಮುತ್ತೈದೆಯರಿಂದ ಹಳ್ಳದಲ್ಲಿ ಗಂಗಾ ಪೂಜೆ ನಡೆದು À ಶ್ರೀ ಮುರುಡಬಸವೇಶ್ವರ ರಾಮದೇವರ ದುರ್ಗಮ್ಮ ವಿವಿಧ ದೇವರುಗಳಿಗೆ ಹೊನ್ನಾಳಿಯ ಎಂ.ಎಸ್. ಶಾಸ್ತ್ರಿ ಹೊಳೆಮಠ ಇವರ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು ಅಗಸೆ ಬಾಗಿಲು ಸ್ಥಾಪನೆಯ ಅಂಗವಾಗಿ ವಿವಿಧ ದಾರ್ಮಿಕ ಪೂಜಾ ಕೈಂಕರ್ಯಗಳು ಕಳೆದ ಸೋಮವಾರದಿಂದ ಪ್ರಾರಂಭಗೊಂಡಿದ್ದವು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರು ಸಾಧು ವೀರಶೈವ ಸಮಾಜದ ತಾಲೂಕ ಅಧ್ಯಕ್ಷ ಜಿ ಶಿವಪ್ಪ , ರೈತ ಸಂಘದ ಶಿವಪ್ಪ , ಯೋಗೇಶಪ್ಪ , ಪರಮೇಶ್ವರಪ್ಪ , ಬಸವರಾಜಪ್ಪಮಾಸ್ತರ್ , ಮಲ್ಲಿಕಾರ್ಜುನ್ ಹಾಲೇಶ್, ಚೆನ್ನೇಶ್ ಸೇರಿದಂತೆ ಗ್ರಾಮದ ಹಿರಿಯರು ಕಿರಿಯರು ಭಾಗವಹಿಸಿದ್ದರು.