ನ್ಯಾಮತಿ: ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೋವಿನ ಕೋವಿ ಸಂಘದ 20 21 -20 22ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಹಕಾರ ಪಿತಾಮಹ ಶ್ರೀಯುತ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮುಖೇನ ಸಂಘದ ಅಧ್ಯಕ್ಷರಾದ ಶ್ರೀ ಜಿ ಧನಂಜಯಪ್ಪ ಮತ್ತು ಸರ್ವ ನಿರ್ದೇಶಕರುಗಳು ಒಟ್ಟಾಗಿ ಸೇರಿ ಚಾಲನೆ ನೀಡಿದರು .
ಪ್ರಾರ್ಥನೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಸ್ವಾಗತ ಭಾಷಣವನ್ನು ವಿ ಹೆಚ್ ರುದ್ರೇಶ್ ನಡೆಸಿಕೊಟ್ಟರು.
ಈ ಸಂಘದ ಅಧ್ಯಕ್ಷರಾದ ಶ್ರೀಯುತ ಜಿ ಧನಂಜಯಪ್ಪ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾಗಿ ಎಂ ಜಗದೀಶ್ ರವರು 20 21- 20 22ನೇ ಸಾಲಿನ ಈ ಸಂಘದಲ್ಲಿ ನಡೆದ ವ್ಯವಹಾರಗಳ ಬಗ್ಗೆ ಲಾಭ ನಷ್ಟದ ವಿಷಯವನ್ನು ಕುರಿತು ಸರ್ವ ನಿರ್ದೇಶಕರುಗಳ ಹಾಗೂ ಷೇರುದಾರರ ಎದುರುಗಡೆ ಆಯ -ವ್ಯಯ ಮಂಡನೆಯನ್ನು ಮಂಡಿಸಿದರು.
ಸಂಘದ ಅಧ್ಯಕ್ಷರಾದ ಜಿ ಧನಂಜಯಪ್ಪ ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿ, ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನನ್ನ ಅಧ್ಯಕ್ಷರ ಅವಧಿಯಲ್ಲಿ ರೈತರುಗಳಿಗೆ ಹಾಗೂ ಷೇರುದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡಿಸಿ ಅದೇ ರೀತಿ ಮರುಪಾವತಿಯನ್ನು ಸಹ ಮಾಡಲಾಗುವುದು ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷರಾದ ವೀರೇಶಪ್ಪನವರು ಸಹ ಹಾಲಿ ಅಧ್ಯಕ್ಷರ ಮಾತಿಗೆ ಸಹ ಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ: ಉಪಾಧ್ಯಕ್ಷರಾದ ಎಸ್ ನಾಗರಾಜಪ್ಪ ನಿರ್ದೇಶಕರಗಳಾದ ಎ ಜಿ ಬಸವನಗೌಡರು, ಎ ಸಿದ್ದು ವೀರಪ್ಪ, ವಿರೇಶಪ್ಪ ಎಸ್ ಎಂ, ಚಂದ್ರಶೇಖರಯ್ಯ, ಶ್ರೀಮತಿ ಸುಷ್ಮಾ, ಎಸ್ ,ಸಿದ್ದಪ್ಪ, ಎಂ ಸಿ, ಸಣ್ಣ ಚಿಕ್ಕಪ್ಪ, ಬಿ ಆರ್ ಕೇಶವಮೂರ್ತಿ, ಮಂಜುನಾಥ್ ,ಶ್ರೀಮತಿ ಪಾಲಾಕ್ಷಮ್ಮ, ಡಿಸಿಸಿ ಬ್ಯಾಂಕಿನ ಕ್ಷೇತ್ರ ಅಧಿಕಾರಿ ವಿ ಲೋಕೇಶಪ್ಪ, ಗುಮಾಸ್ತ ಸಿ ಪಾಲಾಕ್ಷಪ್ಪ ಈ ಸಭೆಯಲ್ಲಿ ರೈತ ಬಾಂಧವರು ಹಾಗೂ ಷೇರುದಾರರು ಸಹ ಭಾಗಿಯಾಗಿದ್ದರು.