ದಾವಣಗೆರೆ ಮಹಾನಗರ ಪಾಲಿಕೆ 21ನೇ ವಾರ್ಡ್ ಬಸಾಪುರದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ನೀಡಲು ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಕೆ.ಎಲ್.ಹರೀಶ್ ಬಸಾಪುರ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಪದ್ಧತಿಯ ಕಾರಣದಿಂದ ಅತಿ ಚಿಕ್ಕ ವಯಸ್ಸಿಗೆ ಕಾಯಿಲೆಗಳಿಂದ ಬಳಲುತ್ತಿರುವುದು ಕಂಡು ಬರುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಜಂಗ್ ಫುಡ್ ನೀಡುವ ಬದಲು ಪೌಷ್ಟಿಕ ಆಹಾರ ನೀಡುವ ಕಡೆ ಗಮನಹರಿಸಬೇಕು ಹಾಗೂ ಹಣದ ಶ್ರೀಮಂತಿಕೆಗಿಂತ ಆರೋಗ್ಯ ಶ್ರೀಮಂತಿಕೆ ಬಹು ಮುಖ್ಯವಾಗಿದ್ದು, ಆರೋಗ್ಯ ಇದ್ದರೆ ಹಣ ಗಳಿಸಬಹುದು, ಹಣದಿಂದ ಆರೋಗ್ಯಗೊಳಿಸಲು ಸಾಧ್ಯವಿಲ್ಲ ಎಂದು ಪೋಷಕರು ಹಾಗೂ ಮಕ್ಕಳಿಗೆ ಕಿವಿಮಾತು ಹೇಳಿದರು.

ಆನೆಕೊಂಡ ಕ್ಲಸ್ಟರ್ ಸಿಆರ್‌ಪಿ ಶೌಕತ್ ಅಲಿ ಮಾತನಾಡಿ ಪೌಷ್ಟಿಕ ಆಹಾರ ಮತ್ತು ಅದರ ಬಳಕೆ ಹಾಗೂ ಅದರ ಪ್ರಯೋಜನಗಳ ಬಗ್ಗೆ ತಿಳಿಸಿದರು ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮಲತಾ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸೋಮಶೇಖರಪ್ಪ,ಶಿಕ್ಷಕರಾದ ಸಂತೋಷ್ ಕುಮಾರ್, ರವಿ, ಶಶಿಕಲಾ, ನಿಂಗಮ್ಮ, ಶಾಂತ, ಮಂಜುಳಾ, ಸೌಮ್ಯ, ಗಾಯತ್ರಿ, ಪ್ರೇಮಲತಾ, ಸ್ಮಿತಾ, ರೀಟಾ, ಇಂದ್ರಮ್ಮ, ಪುಷ್ಪವತಿ, ಎಸ್ ಡಿ ಎಮ್ ಸಿ ಸದಸ್ಯರಾದ ಗುರುಸಿದ್ದಯ್ಯ, ಶಕುಂತಲಾ, ಮಂಜುಳಾ ಗ್ರಾಮಸ್ಥರಾದ ಕರಿಬಸಪ್ಪ, ಚೇತನ್ ಕುಮಾರಿ, ಶ್ವೇತಾ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *