ನ್ಯಾಮತಿ: ಶಾಲಾ ಶಿಕ್ಷಣ ಸಾಕ್ಷರತ ಇಲಾಖೆ ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳ 2022-23 ಸಾಲಿನ ಕಾರ್ಯಕ್ರಮವನ್ನು ದಾನಿಹಳ್ಳಿ ತರಳುಬಾಳು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಇದರ ಉದ್ಗಾಟನೆಯನ್ನು ಶಾಸಕ ಎಂ.ಪಿ ರೇಣುಕಾಚಾರ್ಯ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಶಾಲಾ ಮಕ್ಕಳುÀ ಪ್ರಾರ್ಥನೆಯನ್ನು ನಡೆಸಿಕೊಟ್ಟರು.
ಸ್ವಾಗತ ಭಾಷಣವನ್ನು ಹಾಲೇಶ್ ಕೆ.ಜಿ ನಡೆಸಿದರು.
ಪ್ರಾಸ್ತವಿಕ ನುಡಿಯನ್ನು ಕ್ಷೇತ್ರ ಸಮನ್ವಯ ಅಧಿಕಾರಿ ಆರ್ ತಿಪ್ಪೇಶಪ್ಪ ನಡಿಸಿಕೊಟ್ಟರು.
ತರಳುಬಾಳು ಪ್ರೌಢಶಾಲೆಯ ಕಾರ್ಯದರ್ಶಿ ಮಲ್ಲೇಶಪ್ಪ ಗಂಜಿನಹಳ್ಳಿ ನಂತರ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿಭಾಕಾರಂಜಿ ನಡೆಯಲಿಕ್ಕೆ ನಮ್ಮ ಶಾಲೆಯ ಸಲಹ ಒಪ್ಪಗೆಯ ಮೇರೆಗೆ ಸಾಂಸ್ಕøತಿಕ ಪ್ರತಿಭಾಕಾರಂಜಿ ನಡೆಯುತ್ತಿರುವುದು ಬಹಳ ಸಂತೋಷದಾಯಕ ಎಂದು ಹೇಳಿದರು.
ಸಮೂಹಿಕ ವಿಭಾಗದ 3 ಸ್ಪರ್ಧೆಗಳಾದ ರಸಪ್ರಶ್ನೆ, ಕವಾಲಿ, ಜಾನಪದ ನೃತ್ಯ ಇವುಗಳಲಿ ಪ್ರಥಮ ಸ್ಥಾನ.
ವಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 16, ದ್ವೀತಿಯ ಸ್ಥಾನ 16, ತೃತೀಯ ಸ್ಥಾನ 16 ಈ ವಿಭಾಗದ ಸ್ಪರ್ಧೆಯಲ್ಲಿ ಬರುವ ಧಾರ್ಮಿಕ ಪಠಣ, ಸಂಸ್ಕøತ ಭಾಷಣ, ಭಾವಗೀತೆ, ಚರ್ಚಾ ಸ್ಪರ್ಧೆ, ಇನ್ನೂ ಮುಂತಾದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಈ ಸಂರ್ಧಭದಲ್ಲಿ:- ಸ್ಥಳೀಯ ಸಲಹ ಸಮಿತಿಯ ಸದಸ್ಯರು ನಾಗರಾಜಪ್ಪ, ಪರಮೇಶಪ್ಪ, ಆಂಜನೇಯ ಬಿ.ಹೆಚ್ ಪ್ರೌ.ಶ.ಸ.ಶಿ.ಸಂ.ಅಧ್ಯಕ್ಷರು, ಸಿದ್ದೇಶ್ ಜಗಣಪ್ಪನವರ್ ನ್ಯಾಮತಿ ಎನ್.ಜಿ.ಒ ಕಾರ್ಯದರ್ಶಿ, ವಿಜಯ್ ಕುಮಾರ್ ನೌಕರರ ಸಂಘದ ಅಧ್ಯಕ್ಷ, ಡಾ// ಶಶಿದರ್ ಗೌಡ್ರು ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕರು, ಮತ್ತು ತೀರ್ಪುಗಾರರು ಹಾಗೂ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಹ ಬಾಗಿಯಾಗಿದ್ದರು.