ದಾವಣಗೆರೆ ಜಿಲ್ಲೆಯಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುಮಾರು ಹತ್ತು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದ್ದು, ಹೆಚ್ಚಿದ ಮಳೆಯಿಂದ ಹಾಗೂ ಬಿಸಿಲಿನ ವಾತಾವರಣದಿಂದಾಗಿ ಶಿಲೀಂದ್ರದ ಪ್ರಮಾಣ ಜಾಸ್ತಿಯಾಗಿ ಹೂವು ಉದುರುವುದು ಮತ್ತು ಕಾಯಿ ಕೊಳೆಯುವ ರೋಗ ಅಲ್ಲಲ್ಲಿ ಕಂಡುಬಂದಿದೆ. ಎಂದು ಕೃಷಿ ಜಂಟಿ ನಿರ್ದೇಶಕರಾದ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ.
ಭೂಮಿಗೆ ಸಮೀಪವಿರುವ ಕಾಯಿಗಳು ಕೊಳೆತು,ಬುಳುಸು ಬೆಳೆದು,ಒಮ್ಮೊಮ್ಮೆ ಬುರುಗು ಕಾಣಿಸಿಕೊಳ್ಳುವುದು. ನೀರಾವರಿ ಭಾಗದಲ್ಲಿ ಈ ರೋಗದ ಪ್ರಮಾಣ ಜಾಸ್ತಿ ಇರುತ್ತದೆ.ಗಿಡದಿಂದ ಗಿಡಕ್ಕೆ ಅಂತರ ಕಡಿಮೆ ಇದ್ದು,ಸಾರಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ದಟ್ಟವಾಗಿ ಹತ್ತಿಯನ್ನು ಬೆಳೆದಾಗ ಈ ರೋಗದ ಪ್ರಮಾಣ ಹೆಚ್ಚಾಗಿರುತ್ತದೆ.
ನಿರ್ವಹಣೆ:- ಶಿಲೀಂದ್ರ ನಾಶಕಗಳಾದ ತಾಮ್ರದ ಆಕ್ಸಿ ಕ್ಲೋರೈಡ್ 3 ಗ್ರಾಂ,ಸ್ಟ್ರೆಪ್ಟೋಮೈಸಿನ್ ಸಲ್ಪೇಟ್ 0.5 ಗ್ರಾಂ ಅಥವಾ ಮ್ಯಾಂಕೋಜೆಬ್ 2 ಗ್ರಾಂ+ಕ್ಲೋರೋಥ್ಯಾಲೋನಿಲ್ 2 ಗ್ರಾಂ ಪ್ರತೀ ಲೀ ನೀರಿಗೆ ಸೇರಿಸಿ ಕಾಯಿ ಕಾಣಿಸಿಕೊಂಡಾಗ ಸಿಂಪಡಿಸಬೇಕು.ರೋಗದ ತೀರ್ವತೆಯನ್ನು ಗಮನಿಸಿ 15 ದಿನಗಳ ಅಂತರದಲ್ಲಿ ಎರಡನೆಯ ಸಿಂಪರಣೆಯನ್ನು ಕೊಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಹೂವು ಉದುರುವುದು ಕಂಡುಬಂದಲ್ಲಿ,ಬಿತ್ತನೆಯಾದ 45 ಮತ್ತು 65 ದಿವಸಕ್ಕೆ ಪ್ಲಾನೋಫಿಕ್ಸ್ (ಎನ್.ಎ.ಎ) ಪ್ರತೀ 4 ಲೀಟರ್ ನೀರಿಗೆ 1 ಮಿಲಿ ಯಂತೆ ಮಿಶ್ರಣ ಮಾಡಿ ಎರಡು ಬಾರಿ ಸಿಂಪರಣೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರವನ್ನು ಸಂಪರ್ಕಿಬಹುದೆಂದು ತಿಳಿಸಿದ್ದಾರೆ.