ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ವರ್ಗಾವಣೆಗೊಂಡ ಪಿ.ಡಿ.ಒರಾದ ವಿಜಯ್ ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳÀ ನೇತೃತ್ವದ ಸಾಮಾನ್ಯ ಸಭೆಯಲ್ಲಿ ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ನಂತರ ಮಾತನಾಡಿ ಪಿ.ಡಿ.ಒ ವಿಜಯ್ ಕುಮಾರ್ ರವರು ನಮ್ಮ ಪಂಚಾಯಿತಿಗೆ ಅಭಿವೃದ್ದಿ ಅಧಿಕಾರಿಯಾಗಿ ಬಂದು 2 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಶ್ರಮಿಸಿದಾರೆ ಎಂದು ಹೇಳಿದರು.
ಮುಸ್ಯೇನಾಳ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ್ ರವರು ಮಾತನಾಡಿ ಸರ್ಕಾರದಿಂದ 40 ಲಕ್ಷ ಬಂದ ಹಣ ವಾಪಸ್ ಹೊಗಿತ್ತು, ಆ ಹಣವನ್ನು ವಾಪಸ್ ತರುವಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಪಲವನಹಳ್ಳಿ ಗ್ರಾಮ ಪಂಚಾಯಿತಿಯ ಮುಸ್ಯೇನಾಳ್ ಗ್ರಾಮಕ್ಕೆ ತರುವಲ್ಲಿ 2 ದಿನಗಳ ಕಾಲ ನನ್ನ ಜೊತೆ ಗೂಡಿ ಕೆಲಸವನ್ನು ಮಾಡಿ ಅಭಿವೃದ್ದಿಗೆ ಶ್ರಮಿಸಿದರು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಯ ಗಂಜೀನಳ್ಳಿ ಸದಸ್ಯರಾದ ಪ್ರವೀಣ್, ನಟರಾಜಪ್ಪ,ನಾಗೇಶ್ ನಾಯ್ಕ್, ಇನ್ನೀತರೆ ಸರ್ವ ಸದಸ್ಯರಯರುಗಳು ಸಹ ಪಿ.ಡಿ.ಒ ಗೆ ಧನ್ಯವಾದಗಳನ್ನು ತಿಳಿಸಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಎಲ್ಲರು ಒಟ್ಟಾಗಿ ಸೇರಿ ವಿಜಯ್ ಕುಮಾರ್ ಅವರಿಗೆ ಗೌರವ ವಂಧನೆಗಳನ್ನು ಸಲ್ಲಿಸಿದರು. ಗೌರವ ಸನ್ಮಾನವನ್ನು ಸ್ವೀಕರಿಸಿದ ವರ್ಗಾವಣೆಗೊಂಡ ವಿಜಯ್ ಕುಮಾರ್ ನಂತರ ಮಾತನಾಡಿ ನಾನು 2 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಲಿಕ್ಕೆ ಸರ್ವ ಸದಸ್ಯರುಗಳ ಸಹಕಾರದಿಂದ ಮಾಡಲಿಕ್ಕೆ ಸದ್ಯವಾಹಿತು ಎಂದು ನಿಮ್ಮಲ್ಲರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ಸಂರ್ದಭದಲ್ಲಿ:- ಗ್ರಾಮ ಪಂಚಾಯಿತಿಯ ಪಿ.ಡಿ.ಒ ಸೋಮಣ್ಣ, ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ಸದಸ್ಯರಾದ ಜಯಶ್ರೀ, ನೇತ್ರಮ್ಮ, ಶಕುಂತಲ ಬಾಯಿ ಎಂ.ಕೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗ್ರಾಮಸ್ಥರು ಸಹ ಬಾಗಿಯಾಗಿದ್ದರು.