ಹೊನ್ನಾಳಿ ತಾಲೂಕು ಕೋಟೆ ಮಲ್ಲೂರ್ ಗ್ರಾಮದ ವಾಸಿಯಾದ ಶ್ರೀ ಈರಪ್ಪನವರ ಸಹೋದರ ದಿವಂಗತ ಶ್ರೀ ಶಾಂತಿವೀರಪ್ಪ ಇವರ ಧರ್ಮಪತ್ನಿ ಶರಣಿ ಶ್ರೀಮತಿ ಗಂಗಮ್ಮ ಇವರು ಶಿವೈಕ್ಯರಾದ ಪ್ರಯುಕ್ತ ಮೃತರ ಆತ್ಮ ಶಾಂತಿಗಾಗಿ ಎಂದು ಶಿವಗಣಾರಾಧನೆಯನ್ನು ಮೃತರ ಸ್ವ ಗೃಹದಲ್ಲಿ ನೆರವೇರಿಸಲಾಯಿತು.
ಶರಣೆ ಶ್ರೀಮತಿ ಗಂಗಮ್ಮನವರ ಆತ್ಮಕ್ಕೆ ಶಾಂತಿ ಸಿಗಲೆಂದು ಅಪಾರ ಬಂಧುಗಳು ಹಾಗೂ ಸಮಾಜದ ಬಾಂಧವರು ಹಿತೈಷಿಗಳು ಮಕ್ಕಳು ಮರಿ ಮೊಮ್ಮಕ್ಕಳು ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಗೈದರು.
ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರುಗಳು ಪಕ್ಷಾತೀತವಾಗಿ ರಾಜಕಾರಣಿಗಳು ಕೋಟೆ ಮಲ್ಲೂರ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಬಂದು ಗಂಗಮ್ಮನವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದರು.