ನ್ಯಾಮತಿ: ಪಟ್ಟಣದ ನಾಡ ಕಛೇರಿಯ ಸಭಾಂಗಣದಲ್ಲಿ ಇಂದು ಶ್ರೀ ವಾಲ್ಮಿಕಿ ಜಯಂತಿಯನ್ನು 9-10-22ರಂದು ಆಚರಿಸುವ ಸಲುವಾಗಿ ತಹಿಸಿಲ್ದಾರ್ ಶ್ರೀಮತಿ ರೇಣುಕ ಸವದತ್ತಿಯವರ ಅಧ್ಯಕ್ಷತೆಯಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಧಿಕಾರಿ ಶ್ರೀಮತಿ ಉಮಾರವರು ಯಾವ ರೀತಿ ಶ್ರೀ ವಾಲ್ಮಿಕಿ ಜಯಂತಿಯನ್ನು ಆಚರಿಸಲಿಕ್ಕೆ ನಿಮ್ಮ ಸಲಹೆ ಸಹಕಾರ ಕೊಡಿ ಎಂದು ಹೇಳಿದಾಗ ಸಮಾಜದ ಮುಖಂಡರು ಒಕ್ಕೊರಲಿನಿಂದ ನಮ್ಮ ರಾಜೆನಹಳ್ಳಿ ವಾಲ್ಮಿಕಿ ಪ್ರಸನ್ನಾನಂದ ಶ್ರೀಗಳು ಬೆಂಗಳೂರು ಪ್ರೀಡಂ ಪಾರ್ಕನಲ್ಲಿ 239 ದಿನಗಳಿಂದ ಅಹೋರಾತ್ರಿ ಎಸ್.ಸಿ ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ನಾವು ನ್ಯಾಮತಿ ತಾಲೂಕಿನ ಸಮಾಜದವರು ಜಯಂತಿಯಂದು ಪಾಲಗೊಳ್ಳುವುದಿಲ್ಲ ಎಂದು ಸಭೆಯಿಂದ ಹೊರ ನೆಡೆದು ನ್ಯಾಮತಿ ನಡೆ ಬೆಂಗಳೂರಿನ ಶ್ರೀಗಳ ಕಡೆ ಎಂದು ತಿಳಿಸಿದರು.
ಅ.9 ರಂದು ನಡೆಯುವ ಜಯಂತಿಯಲ್ಲಿ ರಾಜಕಾರಣಿಗಳು ಮತ್ತು ಸಾರ್ವಜನಿಕರು ಪಾಲ್ಗೋಂಡಿದ್ದೆ ಆದಲ್ಲಿ ಕಪ್ಪು ಬಟ್ಟೆಯನ್ನು ಧರಿಸಿ ಉಗ್ರಹ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡುವಂತೆ ಮಾನ್ಯ ತಹಿಸಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂರ್ದಭದಲ್ಲಿ:- ಸಮಾಜದ ಮುಖಂಡರಾದ ಗೌರವ ಅಧ್ಯಕ್ಷರಾದ ರಾಮಚಂದ್ರಪ್ಪ, ಸಹ ಕಾರ್ಯದರ್ಶಿ ಕುದುರೆಕೊಂಡ ಪರಮೇಶ್, ರುದ್ರೇಶ್, ಗಂಗಾದರಪ್ಪ, ಹಿರಿಯ ಮುಖಂಡರಾದ ಗುಡ್ಡಪ್ಪ, ಇನ್ನೂ ಸಮಾದ ಮುಖಂಡರು ಸಹ ಭಾಗಿಯಾಗಿದ್ದರು.