ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಪೇಟೆ ಕಾರ್ಯಕರ್ತರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೀಜ್ ಕಂ ಸೇಲ್ ಆಧಾರದ ಮೇಲೆ ನಿವೇಶನ ಹಂಚಿಕೆ ಪಡೆದು, ನಿವೇಶನದಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳನ್ವಯ ಒಂದು ವರ್ಷದೊಳಗಾಗಿ ಕಟ್ಟಡ ನಿರ್ಮಿಸಿಕೊಳ್ಳತಕ್ಕದ್ದು, ಆದರೆ ಕೆಲವು ಪೇಟೆ ಕಾರ್ಯಕರ್ತರು ಇಲ್ಲಿಯವರೆಗೂ ಹಂಚಿಕೆ ಪಡೆದಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಿಕೊಂಡಿರುವುದಿಲ್ಲ. ಆದ್ದರಿಂದ ಲೀಜ್ ಕಂ ಸೇಲ್ ಆಧಾರದ ಮೇಲೆ ನಿವೇಶನ ಹಂಚಿಕೆ ಪಡೆದಿರುವ ಪೇಟೆ ಕಾರ್ಯಕರ್ತರುಗಳು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳನ್ವಯ ನಿಗಧಿತ ಅವಧಿಯೊಳಗೆ ಕಟ್ಟಡ ನಿರ್ಮಿಸಿಕೊಳ್ಳದೇ ಇರುವವರು ಕಟ್ಟಡ ನಿರ್ಮಿಸಿಕೊಳ್ಳಲು ಒಂದು ಬಾರಿ ಆವಕಾಶ ಮಾಡಿಕೊಡಲಾಗಿದ್ದು, ಕಟ್ಟಡ ನಿರ್ಮಿಸಲು ಇಚ್ಚಿಸುವ ಪೇಟೆ ಕಾರ್ಯಕರ್ತರು ಹಂಚಿಕೆ ಪಡೆದಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಅಕ್ಟೋಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯನ್ನು ಸಂಪಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
===
ಕ್ಷಯರೋಗ ನಿರ್ಮೂಲನ ಸಹಭಾಗಿತ್ವಕ್ಕಾಗಿ ಖಾಸಗಿ ಅಥವಾ ಎನ್.ಜಿ.ಓ ಸಂಸ್ಥೆಗಳಿಂದ ಸೇವೆಗಳಿಗೆ ಅರ್ಜಿಯನ್ನು ಆಹ್ವಾನ
ದಾವಣಗೆರೆ ಸೆ.30 (ಕರ್ನಾಟಕ ವಾರ್ತೆ)
ಕ್ಷಯಮುಕ್ತ ಕರ್ನಾಟಕ ಅಭಿಯಾನದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಸಹಭಾಗಿತ್ವಕ್ಕಾಗಿ ಖಾಸಗಿ ಅಥವಾ ಎನ್.ಜಿ.ಓ ಸಂಸ್ಥೆಗಳಿಂದ ಸೇವೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ 2025ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿಯನ್ನು ಹೊಂದಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಕೂಡ ಕ್ಷಯರೋಗ ನಿರ್ಮೂಲನೆ ಗುರಿಯೊಂದಿಗೆ ‘ಕ್ಷಯಮುಕ್ತ ಕರ್ನಾಟಕ’ ಎಂಬ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೇ.80 ರಷ್ಟು ಕ್ಷಯರೋಗಿಗಳಿಗೆ ಶ್ವಾಸಕೋಶದ ಕ್ಷಯ ಕಂಡುಬರುವುದರಿಂದ ಎದೆಯ ಕ್ಷ-ಕಿರಣ ಪರೀಕ್ಷೆಯಿಂದ ಹೆಚ್ಚಿನ ಕ್ಷಯರೋಗಿಗಳನ್ನ ಗುರುತಿಸಬಹುದಾಗಿರುತ್ತದೆ.
1.ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸಂಭವನೀಯ ಕ್ಷಯರೋಗಿಗಳನ್ನು ಎದೆಯ ಕ್ಷ-ಕಿರಣ ಮೂಲಕ ಪರಿಕ್ಷೀಸಲು ಖಾಸಗಿ ಎಕ್ಸ್-ರೇ ಕೇಂದ್ರಗಳ ಸಹಕಾರದೊಂದಿಗೆ ಆಸಕ್ತವುಳ್ಳ ಕೆ.ಪಿ.ಎಂ.ಇ ನೊಂದಾಯಿತ ಏಕ್ಸ್-ರೇ ಕೇಂದ್ರಗಳು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿ, ದಾವಣಗೆರೆ ಇವರನ್ನು ಸಂಪರ್ಕಿಸಿ 2022-23ನೇ ಸಾಲಿಗೆ ಏಕ್ಸ್-ರೇ ಸೇವೆಯನ್ನು ಒದಗಿಸುವ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
2.ಶ್ವಾಸಕೋಶದ ಕ್ಷಯವನ್ನು ರೋಗ ನಿರ್ಧಾರ ಮಾಡಲು ಕಫ ಪರೀಕ್ಷೆಯು ಅತ್ಯಂತ ಅವಶ್ಯಕವಾಗಿದ್ದು, ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಲ್ಲಿ ಸಂಭಾವ್ಯ ಕ್ಷಯರೋಗಿಗಳು ಬಂದಾಗ ಅವರಲ್ಲಿ ಕಫ ಮಾದರಿಗಳನ್ನು ಸಂಗ್ರಹಿಸಿ, ಸರ್ಕಾರಿ ಲ್ಯಾಬ್‍ಗಳಿಗೆ ನಿಯಮಾನುಸಾರ ರವಾನೆ ಮಾಡುವುದರ ಮೂಲಕ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಪಡೆಯುತ್ತಿರುವ ಸಂಭಾವ್ಯ ಕ್ಷಯ ರೋಗಿಗಳಿಗೆ ಉಚಿತವಾಗಿ ಕಫ ಪರೀಕ್ಷೆಯನ್ನು ಮಾಡುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಜಿಲ್ಲಾ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಅಪೇಕ್ಷಿಸಲಾಗಿದೆ.
ಕಫದ ಮಾದರಿಗಳನ್ನು ನಿಯಮಾನುಸಾರ ರವಾನಿಸುವಂತಹ ಸ್ವಯಂಸೇವಕರನ್ನು ಒಳಗೊಂಡ ನೊಂದಾಯಿತ ದಾವಣಗೆರೆ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿ ರೂಂ ನಂ:14, ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಚೇರಿ, ಎನ್.ಸಿ.ಸಿ ಕ್ಯಾಂಪ್ ಹಿಂಬಾಗ, ರಾಮನಗರ ರಸ್ತೆ, ದಾವಣಗೆರೆ-577004 ಇಲ್ಲಿಗೆ ಅಥವಾ ಶಿವರಾಯಪ್ಪ ದೊಡ್ಡಮನಿ, ಪಿ.ಪಿ.ಎಂ ಕೋಆರ್ಡಿನೇಟರ್, ಮೊಬೈಲ್ ಸಂಖ್ಯೆ 9901874005 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *