ರಕ್ತದಾನ ಶ್ರೇಷ್ಠದಾನ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸುವಂತೆ ಡಾ|| ಪ್ರಭಾ ಮಲ್ಲಿಕಾರ್ಜುನ್ ಕರೆ
ದಾವಣಗೆರೆ: ಅನ್ನದಾನ, ವಿದ್ಯಾದಾನ ಅಂತೆಯೇ ರಕ್ತದಾನವೂ ಸಹ ಶ್ರೇಷ್ಠವಾದದು. ಒಬ್ಬ ಆರೋಗ್ಯವಂತಹ ಮನುಷ್ಯ ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಕರೆ ನೀಡಿದ್ದಾರೆ. ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ…