ಜಿಲ್ಲಾಢಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರಾಭಿವೃದ್ದಿ ಕೋಶ, ಆಹಾರ ಸುರÀಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಚನ್ನಗಿರಿ ತಾಲ್ಲೂಕು ತಂಬಾಕು ನಿಯಂತ್ರಣ ತನಿಖಾ ತಂಡದೊಂದಿಗೆ ಬಸವಾಪಟ್ಟಣ ಹಾಗೂ ಸಾಗರಪೇಟೆಯಲ್ಲಿ ತಂಬಾಕು ದಾಳಿ ಕೈಗೊಳ್ಳಲಾಯಿತು.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003 ರ ಅಡಿಯಲ್ಲಿ ಸೆಕ್ಷನ್-04 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಅಡಿ 12 ಪ್ರಕರಣ ದಾಖಲಿಸಿ 1200 ರೂ ದಂಡ, ಹಾಗೂ ಸೆಕ್ಷನ್-6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಸಿಗದಂತೆ ನಿಯಂತ್ರಣ ಮಾಡುವುದರ ಅಡಿ 8 ಪ್ರಕರಣ ದಾಖಲಿಸಿ 800 ರೂ ದಂಡ ಸೇರಿ ಒಟ್ಟು 20 ಪ್ರಕರಣಗಳನ್ನು ದಾಖಲಿಸಿ ರೂ.2000 ದಂಡ ವಿಧಿಸಲಾಗಿದೆ.
ದಾಳಿಯ ವೇಳೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ಮಂತ್ರಾಲಯದ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ಕಚೇರಿ (ಈ ಪ್ರದೇಶದಲ್ಲಿ ಜಗಿಯುವ ಹಾಗೂ ಸೇದುವ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿದೆ) ಎನ್ನುವ ನಾಮಫಲಕ ಅಳವಡಿಸಲಾಯಿತು.
ದಾಳಿಯಲ್ಲಿ ಎಂ ವಿ ಹೊರಕೇರಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ, ಸತೀಶ ಕಲಿಹಾಳ ಜಿಲ್ಲಾ ಸಲಹೆಗಾರ ತಂಬಾಕು ನಿಯಂತ್ರಣ ಕೋಶ, ಶೃತಿ ಎಂ ಪ್ರೋಬೆಷನರಿ ಪೊಲೀಸ್ ಉಪ ನಿರೀಕ್ಷಕರು, ಸಿದ್ದೇಶ ಆರೋಗ್ಯ ನೀರೀಕ್ಷಣಾಧಿಕಾರಿ, ಬಸವಾಪಟ್ಟಣ ಪೊಲೀಸ್ ಠಾಣೆಯ ಪ್ರಕಾಶ ಹಾಗೂ ಅಣ್ಣೇಶ ಮತ್ತು ಸಹಾಯಕ ಕೃಷ್ಣ ಭಾಗವಹಿಸಿದ್ದರು.