ನ್ಯಾಮತಿ ಯುವ ಬ್ರಿಗೇಡ್ ವತಿಯಿಂದ ಶನಿವಾರ ಆಯೋಜಿಸಿದ್ದ ಭಾರತಕ್ಕೆ ಕರ್ನಾಟಕ ಕೊಡುಗೆ ಕನ್ನಡತೇರು ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ಕನ್ನಡತೇರಿಗೆ ಪೂಜೆ ನೆರವೇರಿಸಿ ಚಿತ್ರ ಪ್ರದರ್ಶನ ಪ್ರದರ್ಶಿಸಲಾಯಿತು.
ಭಾರತದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹನೀಯರ ಸ್ಮರಣೆ ಮಾಡುವುದು ನಮ್ಮ ಪುಣ್ಯದ ಕೆಲಸ ಎಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಗಿರಿಜಮ್ಮ ಹೇಳಿದರು.
ಪಟ್ಟಣದಲ್ಲಿಯುವಬ್ರಿಗ್ರೇಡ್ ವತಿಯಿಂದ ಆಯೋಜಿಸಿದ್ದ ದೇಶಕ್ಕೆಕರ್ನಾಟಕಕೊಟ್ಟ ಕೊಡಿಗೆಗ¼ನ್ನು ನೆನೆಯಲು ಮತ್ತು ಪರಿಚಯಿಸುವ ಸಲುವಾಗಿ ಯುವಬ್ರಿಗೇಡ್‍ನಕನ್ನಡತೇರುರಾಜ್ಯಾದ್ಯಂತ ಸಂಚರಿಸುತ್ತ ಶನಿವಾರ ಪಟ್ಟಣಕ್ಕೆ ಬಂದ ಸಂದರ್ಭದಲ್ಲಿಕಾಲೇಜಿನಆವರಣದಲ್ಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡತೇರಿನಲ್ಲಿ ಅಳವಡಿಸಿರುವ ಪರದೆಯ ಮೇಲೆ ಪ್ರದರ್ಶಿಸಿದ ಚಿತ್ರವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ನಂತರದಲ್ಲಿ ವಿವೇಕಾನಂದ ಪ್ರೌಢಶಾಲೆ, ತರಳಬಾಳು ವಿದ್ಯಾಸಂಸ್ಥೆ, ಕೆಪಿಎಸ್ ಶಾಲೆ ಹಾಗೂ ಸವಳಂಗ ಶಾಲೆಗಳಲ್ಲಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ, ನಿರ್ದೇಶಕರಾದಚಂದ್ರೇಗೌಡ, ಜಂಗ್ಲೀಚಂದನ, ಬಂಡಿಈಶ್ವರಪ್ಪ, ಆಯಾ ಶಾಲೆಗಳ ಶಿಕ್ಷಕರು ಮತ್ತುಯುವಬ್ರಿಗೇಡ್‍ಸೋಗಿ ಶರತ್ ಮತ್ತು ಸದಸ್ಯರುಇದ್ದರು.

Leave a Reply

Your email address will not be published. Required fields are marked *