ನ್ಯಾಮತಿ ಃ ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ವೈಭವೋಪೇತ ಅಂಬಾರಿ ಉತ್ಸವ ಗುರುವಾರ ನಡೆಯಿತು.
ಪಟ್ಟಣದ ಶ್ರೀ ಕಾಳಿಕಾಂಬಾ ಬೀದಿಯ ಶ್ರೀ ಕಾಳಿಕಾಂಬಾ ದೇಗುಲದ ಶ್ರೀ ಕಾಳಿಕಾಂಬಾ ದೇವಿಯ ಮೂರ್ತಿ ಇದ್ದ ಅಂಬಾರಿ ಹೊತ್ತ ಗಜರಾಜ , ಅಲಕೃತ ವಾಹನದಲ್ಲಿ ಹೊನ್ನಾಳಿ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ , ವಡ್ಡನಾಳ್ ವಿಶ್ವ ಕರ್ಮ ಸಾವಿತ್ರಿ ಪೀಠ ಕಾಶಿಮಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿಯವರ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನದ 11 ಗಂಟೆ ಹೊತ್ತಿಗೆ ಶ್ರೀ ಕಾಳಿಕಾಂಬಾ ದೇವಿಯ ವೈಭವೋಪೇತ ಅಂಬಾರಿ ಉತ್ಸವಗೆÀ ಪುರೋಹಿತರ ಮತ್ತು ಅರ್ಚಕರ ವೃಂದ ಪೂಜಾ ಸಲ್ಲಿಸುವಮೂಲಕ ಚಾಲನೆ ನೀಡಿದರು.


ದೇಗುಲದಲ್ಲಿ ಶ್ರೀ ವಿಘ್ನೇಶ್ವರ , ಶ್ರೀ ಕಾಳಿಕಾಂಬಾ ದೇವಿಯ ಮೂರ್ತಿ , ಶ್ರೀಮೌನೇಶ್ವರ ಸ್ವಾಮಿ , ನವಗ್ರಹಗಳ ಶಿಲಾ ಮೂರ್ತಿಗೆ ಶ್ರೀ ಕಾಳಿಕಾಂಬಾ ದೇವಿಯ ದಸರಾ ಮಹೋತ್ಸವದ ಅಂಗವಾಗಿ ಕಳೆದ 11 ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಿತ್ಯ ಸಾವಿರಾರು ಜನ ದೇವಿಯ ದರ್ಶನ ಪಡೆದರು. ಅಂಬಾರಿ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಸುತ್ತ ಮುತ್ತಲಿನ ಜನ ಬಂದಿದ್ದರು. ದೇಗುಲದ ಬಳಿ ಪೂಜೆ ಸಲ್ಲಿಸಿ ಆರಂಭವಾದ ಮೆರವಣಿಗೆ ಮುಖ್ಯರಸ್ತೆಯ ತನಕ ಸಾಗಿತು. ದಾರಿಯುದ್ದಕ್ಕೂ ಪೂಜೆ, ಮಂತ್ರ, ಹೂವಿನ ಮಳೆಗೆರೆಯಲಾಯಿತು.
ಹಲವು ವರ್ಷÀಗಳಿಂದ ದಸರಾ ನಡೆಸಿಕೊಂಡು ಬಂದಿರುವ ಶ್ರೀ ಕಾಳಿಕಾಂಬಾ ದೇವಿಯ ದಸರಾ ಮಹೋತ್ಸವದಲ್ಲಿ ಇದೇ ಪ್ರಥಮಬಾರಿಗೆ ಅಂಬಾರಿ ಉತ್ಸವ ನಡೆಸಲಾಗಿದ್ದು ದೇಗುಲದ ಪದಾದಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *