ನ್ಯಾಮತಿ ಃ ವಿಶ್ವಕರ್ಮ ಸಮಾಜ ಇಂದು ಕುಶಲ ಕರ್ಮಿಗಳಾಗಿ ಸಮಾಜದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜ ಎಂದು ಹೊನ್ನಾಳಿ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಅವರು ನ್ಯಾಮತಿ ಪಟ್ಟಣದ ಪಟ್ಟಣದ ಶ್ರೀ ಕಾಳಿಕಾಂಬಾ ಬೀದಿಯ ಶ್ರೀ ಕಾಳಿಕಾಂಬಾ ದೇಗುಲದ ಶ್ರೀ ಕಾಳಿಕಾಂಬಾ ದೇವಿಯ ದಸರಾ ಮಹೋತ್ಸವ ಸನಾತನ ಧರ್ಮೋತ್ಸವ , ದೇವಿಯ ಅಂಬಾರಿ ಉತ್ಸವದ ಅಂಗವಾಗಿ ಗುರುವಾರ ಆಯೋಜಿಸಲಾಗಿದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನರ ಮಾನವ, ಮಾನವನಾಗಲೂ ದೈವತ್ವ ಪಡೆಯಲು, ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಹಾಗೂ ರಾಜಯೋಗಿಗಳಾಗಿ ಮುಕ್ತಿ ಹೊಂದಲು ದೇವರ ನೆನೆಯಬೇಕು , ಯಾರು ಮಹಾತ್ಮರ ಇತಿಹಾಸ ತಿಳಿಯುವುದಿಲ್ಲವೋ ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ವಿಶ್ವಕರ್ಮರು ದೇವಾನು ದೇವತೆಗಳಿಗೆ ಧರ್ಮ ಅಧರ್ಮದ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಎಲ್ಲಿ ಧರ್ಮ ನಡೆಯುತ್ತದೆಯೋ ಅಲ್ಲಿ ಶಿವನು ನೆಲೆಸುತ್ತಾನೆ. ಶಿವನ ಇನ್ನೊಂದು ರೂಪವೇ ವಿಶ್ವಕರ್ಮ ಆಗಿದ್ದರು ಎಂದರು.
ಸಾನಿದ್ಯ ವಹಿಸಿದ ವಡ್ಡನಾಳ್ ವಿಶ್ವ ಕರ್ಮ ಸಾವಿತ್ರಿ ಪೀಠ ಕಾಶಿಮಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಮತನಾಡಿ ವಿಶ್ವಕರ್ಮ ಅವರ ಐದು ಮಕ್ಕಳು ಒಂದೊಂದು ಕಲೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಇವರು ಕಲೆಯ ಪ್ರಸಾರಕ್ಕಾಗಿ ವಿವಿಧ ಪ್ರದೇಶಗಳಿಗೆ ತೆರಳಿ, ಚಿತ್ರಕಲೆ, ಶಿಲ್ಪಕಲೆ ಹೀಗೆ ಹಲವಾರು ಕರಕುಶಲ ಕಲೆ ಬಗ್ಗೆ ಜನರಿಗೆ ತಿಳಿಸಿದ್ದರು. ಜನನದಿಂದ ಮರಣದವರೆಗೂ ವಿಶ್ವಕರ್ಮ ಸಮಾಜದವರ ಸಮಾಜಕ್ಕೆ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಆಖಿಲ ಭಾರತ ವಿಶ್ವಕರ್ಮ ಪರಿಷತ್‍ನ ರಾಜ್ಯಾಧ್ಯಕ ಚಳ್ಳಕೆರೆಯ ಆರ್.ಪ್ರಸನ್ನಕುಮಾರ್ , ಚನ್ನಗಿರಿಯ ಸಮಾಜದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ , ಹೊನ್ನಾಳಿ ಅಧ್ಯಕ್ಷ ಕೆ.ರುದ್ರಪ್ಪ , ಕೆ.ಬೆನಕಪ್ಪಚಾರ್ , ಅಜ್ಜಂಪುರದ ಚಂದ್ರಶೇಖರ್ ಆಚಾರ್ , ಹವಳದ ಲಿಂಗರಾಜ್ ಸೇರಿದಂತ ಇತರರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಧ್ಯಕ್ಷ ನಾಗರಾಜ್‍ಆಚಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನೆಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ , ಹೊಸಮನೆ ಮಲ್ಲಿಕಾರ್ಜುನ , ರಾಮೇಶ್ವರದ ಚಂದ್ರೇಗೌಡ , ವಿಜೇಂದ್ರಮಹೇಂದ್ರಕರ್, ಹಾಲೇಶ್ , ಗುಂಡೂರು ಲೋಕೆಶ್ ಸೇರಿದಂತೆ ಹಲವಾರು ಸಮಾಜದ ಮುಖಂಡರು ಇದ್ದರು.

Leave a Reply

Your email address will not be published. Required fields are marked *