ನ್ಯಾಮತಿ ಃ ಹಿಂದೂಗಳ ಹಾಗೂ ಹಿಂದೂ ದಲಿತರ ಮೇಲಿನ ದೌರ್ಜನ್ಯ ಹಾಗೂ ಹಿಂದೂ ದಲಿತರ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಶೋಷಣೆ ಮತ್ತು ಕಗ್ಗೋಲೆಗಳು, ಕ್ರೈಸ್ತ ಮತಾಂತರಿಗಳು ಮತ್ತು ಜಿಹಾದಿ ಮತೀಯಾ ವಿದ್ರೋಹಗಳ ಕೃತ್ಯಗಳನ್ನು ಖಂಡಿಸಿ ಬೃಹತ್ ಪಾದೆಯಾತ್ರೆ ಮೆರವಣಿಗೆ ಅಕ್ಟೋಬರ್ 9 ರ ಶನಿವಾರದಿಂದ ರಾಜ್ಯಾದಂತ ಹಮ್ಮಿಕೊಂಡಿರುವುದಾಗಿ ನವ ಭಾರತ ಹಿಂದೂ ದಲಿತ ಸಂಘದವರು ಹೇಳಿದರು.
ನ್ಯಾಮತಿ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನವ ಭಾರತ ಹಿಂದೂ ದಲಿತ ಸಂಘದಿಂದ ರಾಜ್ಯಾದ್ಯಂತ ಮತೀಯಾ ವಿದ್ರೋಹಗಳ ಕೃತ್ಯಗಳನ್ನು ಖಂಡಿಸಿ ರಾಜ್ಯಾದಂತ ಬೃಹತ್ ಪಾದೆಯಾತ್ರೆ ಮೆರವಣಿಗೆ ನಡೆಸುತ್ತಿದ್ದು ಪಾದಯಾತ್ರೆಯೂ ಅಕ್ಟೋಬರ್ 9 ರ ಶನಿವಾರದಿಂದ ಚಿತ್ರದುರ್ಗದ ಅಂಬೇಡ್ಕರ್ ವೃತ್ತದಿಂದ ಹೊರಟು ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರು ಫ್ರೀಡಂ ಪಾರ್ಕವರೆಗೂ ಬೃಹತ್ ಪಾದಯಾತ್ರೆ ಮೆರವಣಿಗೆಯನ್ನು ತಲುಪಲಿದೆ ಎಂದು ಹೇಳಿದರು.
ಈ ಒಂದು ಪಾದಯಾತ್ರೆ ಮೆರವಣಿಗೆಯಲ್ಲಿ ಹಿಂದೂ ಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಗೊಳಿಸುವಂತೆ ನ್ಯಾಮತಿ-ಹೊನ್ನಾಳಿ ತಾಲೂಕು ನವ ಭಾರತ ಹಿಂದೂ ದಲಿತ ಸಂಘದದವರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಂದುಲ ಉಗ್ರ ನರಸಿಂಹ ಓಬಳೇಶ್ ಬಿ, ಎಸ್.ಉಮೇಶ್ ಜಿಂಕ್ಲೂರ್, ಗಿರೀಶ್ ಆರುಂಡಿ, ವಸಂತ್ ಮನು ಕುಮಾರ್ ಇತರರು ಇದ್ದರು.

Leave a Reply

Your email address will not be published. Required fields are marked *