ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಹೊನ್ನಾಳಿ ಸಿಪಿಐ ಸಿದ್ದೇಗೌಡ ಹಾಗೂ ನ್ಯಾಮತಿ ಪಿಎಸ್ಐ ರಮೇಶ್ ಪಿ ,ಎಸ್ ಇವರ ನೇತೃತ್ವದಲ್ಲಿ ನ್ಯಾಮತಿ ತಾಲ್ಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ನ್ಯಾಯ ಬೆಲೆಯ ಪಡಿತರ ಅಕ್ಕಿಯನ್ನು ಖರೀದಿ ಮಾಡಿ, ಮೆಕ್ಕೆಜೋಳ ಲಾರಿ ಲೋಡ್ ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಟ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕರೊಂದಿಗೆ ದಾಳಿ ಮಾಡಿದ್ದು, ಸುಮಾರು 53 ಚೀಲ ಅಕ್ಕಿ ಹಾಗೂ ಸುಮಾರು 200 ಚೀಲ ಮೆಕ್ಕೆಜೋಳವನ್ನು ವಶಪಡಿಸಿಕೊಂಡಿದ್ದು ಈ ಸಂಬಂಧ ಓರ್ವ ಆರೊಪಿತನನ್ನು ದಸ್ತಗಿರಿ ಮಾಡಿದ್ದು, ಆರೋಪಿತನ ಗೋದಾಮಿನಲ್ಲಿ ಸುಮಾರು 70 ಚೀಲದಷ್ಟು ದಾಸ್ತಾನು ಮಾಡಲಾಗಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 123 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಆರೋಪಿತನ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 139/2022 ರಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಪಿಎಸ್ಐ ರಮೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.