ನ್ಯಾಮತಿ ಃ ವಿಜಯ ನಗರ ಸಂಸ್ಥಾನದ ಬೆಳಗುತ್ತಿ ಅರಸು ಬಾಂಧವರ ಧರ್ಮದರ್ಶಿ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿರುವ ನ್ಯಾಮತಿ ತಾಲೂಕಿನ ಕಲ್ಬಿಗಿರಿ ಬೆಟ್ಟದ ಮೇಲಿರುವ ಶ್ರೀ
ಕಲ್ಬಿಗಿರಿ ರಂಗನಾಥ ಸ್ವಾಮಿಯ ದೀಪಾರಾಧನೆ , ಬನ್ನಿ (ಜಾತ್ರಾ) ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಬನ್ನಿ ಮುಡಿಯುವ ಮೂಲಕ ಭಾನುವಾರ ನಡೆಯಿತು.
ಅಲಂಕರಿಸಿದ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಸಕಲ ವಾದ್ಯಗಳೊಂದಿಗೆ ಬನ್ನಿ ವೃಕ್ಷದ ಕಟ್ಟೆಗೆ ಬಂದು, ಅರ್ಚಕರು ಪೂಜೆ ಸಲ್ಲಿಸಿದ ನಂತರ ಬನ್ನಿ ವಿತರಣೆ ಕಾರ್ಯಕ್ರಮ ನಡೆಯಿತು.
ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಬನ್ನಿ (ಜಾತ್ರಾ) ಮಹೋತ್ಸವವನ್ನು ಸಾವಿರಾರು ಭಕ್ತರು `ಬನ್ನಿ ಪಡೆದು, ಬಂಗಾರದಂಗೆ ಜೀವನ ಸಾಗಿಸೋಣ’ ಎಂದು ಪರಸ್ಪರ ಹರಸಿದರು. ಅರಸು ವಿಜಯ ನಗರ ಸಂಸ್ಥಾನದ ಬೆಳಗುತ್ತಿ ಅರಸು ವಂಶಸ್ಥರು , ದೇಗುಲದ ಧರ್ಮದರ್ಶಿ ಬಿ.ಪಿ.ಸುಬ್ರಮಣ್ಯ ರಾಜ್ , ಬಿ.ಪಿ.ನವಿನ್ ರಾಜ ಅರಸ್ , ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು , ಭಕ್ತರ , ದಾಸರೊಂದಿಗೆ ಬನ್ನಿ (ಜಾತ್ರಾ) ಮಹೋತ್ಸವವುದ ಪೂಜಾ ಕೈಂಕರ್ಯಗಳಲ್ಲಿ ನ್ಯಾಮತಿ ತಹಶೀಲ್ದಾರ್, ನ್ಯಾಮತಿ ಠಾಣಾಧಿಕಾರಿ ಸೇರಿದಂತೆಜನರು ಭಕ್ತಿಯಿಂದ ಭಾಗವಹಿಸಿದರು.
ಬನ್ನಿ (ಜಾತ್ರಾ) ಮಹೋತ್ಸವವುದ ಅಂಗವಾಗಿ , ಶುಕ್ರವಾರ , ಶನಿವಾರ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿಯ ಶಿಲಾಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದು ದೀಪಾರಾಧನೆ , ವಿಶೇಷ ಅಲಂಕಾರ ನಡೆಸಲಾಗಿತ್ತು.ಭಾನುವಾರ ಬನ್ನಿಯ ನಂತರ ಭೂತಪ್ಪನ ಸೇವೆ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *