ಹರಿಹರ ತಾಲ್ಲೂಕಿನ ಹಾಗೂ ಸುತ್ತ ಮುತ್ತ ತಾಲ್ಲೂಕಿನ ರೈತ ಭಾಂಧವರಿಗೆ, ವ್ಯಾಪಾರಸüರು ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲುಂಪಿ ಚರ್ಮ ರೋಗ) ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಅ.11 ರಿಂದ 29 ರವರೆಗೆ ಜಾನುವಾರು ಸಂತೆಯನ್ನು, ಜಾನುವಾರು ಜಾತ್ರೆ, ಜಾನುವಾರು ಸಾಗಾಣಿಕೆ ನಿಷೇಧಿಸುವಂತೆ ಹರಿಹರ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ಜರುಗುವ ಜಾನುವಾರು (ಕುರಿ ಮತ್ತು ಮೇಕೆ) ಸಂತೆಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಆದ್ದರಿಂದ ಕುರಿ ಮತ್ತು ಮೇಕೆ ಹಾಗೂ ಜಾನುವಾರುಗಳನ್ನು ರೈತಭಾಂಧವರು ಮಾರಾಟಕ್ಕೆ ತರಬಾರದು. ಖರೀಧಿದಾರರು, ಮಾರಾಟಗಾರರು, ಸಾರ್ವಜನಿಕರು ಸಹಕರಿಸಬೇಕೆಂದು ಹರಿಹರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ತಿಳಿಸಿದ್ದಾರೆ.