ಮಾಯಕೊಂಡ ಹೋಬಳಿ ಶ್ಯಾಗಲೆ ಗ್ರಾಮದಲ್ಲಿ ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಬೀಜೋಪಚಾರ ಆಂದೋಲನ ಕುರಿತ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ಯಾಗಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುದ್ರೇಶಪ್ಪನವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಉಪನಿರ್ದೇಶಕರಾದ ತಿಪ್ಪೇಸ್ವಾಮಿ, ನೆರವೇರಿಸಿ ಕೀಟನಾಶಕಗಳ ಬಳಕೆ, ಪಿಎಂಕಿಸಾನ್ ಯೋಜನೆಯಡಿ ರೈತರು ಇಕೆವೈಸಿ (ಇಏಙಅ) ಮಾಡುವ ಕುರಿತು ಹಾಗೂ ಕೃಷಿ ಇಲಾಖೆಯಡಿ ರೈತರಿಗೆ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ತದನಂತರ ದಾವಣಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಧರಮೂರ್ತಿ ಡಿ.ಎಂ. ಇವರು ನ್ಯಾನೋ ಯೂರಿಯಾ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಮಾಯಕೊಂಡ ಹೋಬಳಿ ಕೃಷಿ ಅಧಿಕಾರಿ ತೇಜವರ್ಧನ್‍ರವರು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಶ್ಯಾಗಲೆ ಗ್ರಾಮ ಮುಖಂಡರಾದ ಪಿ.ಎನ್. ನಾಗೇಂದ್ರಪ್ಪ ಮತ್ತು ಮಹೇಶ್ವರಪ್ಪನವರು ಹಾಗೂ ಶ್ಯಾಗಲೆ ಗ್ರಾಮದ ರೈತರು, ರೈತ ಮಹಿಳೆಯರು, ಶ್ಯಾಗಲೆ ವಿಭಾಗದ ಕೃಷಿ ಅಧಿಕಾರಿ ಚನ್ನನಗೌಡ, ಸಹಾಯಕ ಕೃಷಿ ಅಧಿಕಾರಿ ನಾಗೇಂದ್ರಪ್ಪ ಮತ್ತು ಆತ್ಮ ಯೋಜನೆಯ ತಾಂತ್ರಿಕ ಸಹಾಯಕ ರಮೇಶ್ ಉಪಸ್ಥಿತರಿದ್ದರು.